ಉಪ್ಪಳ ತುರ್ತಿ ಪಡೆಂಕುಡಿಯ ತರವಾಡಿನಲ್ಲಿ 2026 ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ವಿಶೇಷ ಸಮಾಲೋಚನಾ ಸಭೆ

ಉಪ್ಪಳ ತುರ್ತಿ ಪಡೆಂಕುಡಿಯ ತರವಾಡಿನಲ್ಲಿ 2026 ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ವಿಶೇಷ ಸಮಾಲೋಚನಾ ಸಭೆ ತರವಾಡು ಕ್ಷೇತ್ರದಲ್ಲಿ ನಡೆಯಿತು.

ಸಭೆಯಲ್ಲಿ ಉತ್ತರ ಮಲಬಾರ್ ತೀಯಾ ಕ್ಷೇತ್ರ ಸಂರಕ್ಷಣಾ ಸಮಿತಿ ಇದರ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಜನ್ ಪೆರಿಯ ಉಪಸ್ಥಿತರಿದ್ದು ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ಸಮಗ್ರ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸುಕುಮಾರ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಆಚಾರ ಪಟ್ಟವರಾದ ಶ್ರೀ ಹರಿಪ್ರಸಾದ್ ಬೆಳ್ಚಪ್ಪಾಡರು ಉಪಸ್ಥಿತರಿದ್ದರು.

ಕನಿಲ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ವಿಶ್ವನಾಥ ಕುದುರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಕಡಪರ, ಅಡ್ಕ ಶ್ರೀ ಭಗವತಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಶ್ರೀ ಜಯಂತ ಬಂದ್ಯೋಡ್, ದೇವದಾಸ್ ಕೊಲ್ಯ, ತರವಾಡು ಅಧ್ಯಕ್ಷರಾದ ಶ್ರೀ ಸುಂದರ ಪೆರುವಾಡು, ಕಾರ್ಯದರ್ಶಿ ಶ್ರೀ ರಾಘವ ಮುಟ್ಟಂ ಇವರು ಉಪಸ್ಥಿತರಿದ್ದರು. ಭಾಸ್ಕರ್ ಕೊಂಡೆವೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಸುಂದರ ಪೆರುವಾಡು ವಂದನೆ ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!