ಡಿಸೆಂಬರ್ 16 ರಂದು ನಗರದ ಕದ್ರಿ ಹಿಲ್ಸ್‌ ನಲ್ಲಿ “ವಿಜಯ ದಿವಸ” ವೀರಯೋಧರ ಸ್ಮರಣೆ … !

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ , ನಿಟ್ಟೆ ಶಿಕ್ಷಣ ಸಂಸ್ಥೆ , ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3181 , ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 ಡಿ ಇದರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ವೀರಯೋಧರು ಮಾಡಿದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುತ್ತಾ ಡಿಸೆಂಬರ್ 16 ರಂದು ಬೆಳಿಗ್ಗೆ 9:00 ಗಂಟೆಗೆ, “ವಿಜಯ ದಿವಸ” ವನ್ನು ಮಂಗಳೂರು ನಗರದ ಕದ್ರಿ ಹಿಲ್ಸ್‌ ನಲ್ಲಿರುವ ಯೋಧರ ಯುದ್ಧಸ್ಮಾರಕದಲ್ಲಿ ಹೂಹಾರವನ್ನು ಅರ್ಪಿಸಿ, ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಲಾಗುವುದೆಂದು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ವಿಜಯ ದಿವಸವನ್ನು ನಮ್ಮ ದೇಶದಲ್ಲಿ ಡಿಸೆಂಬರ್ 16 ರಂದು ಆಚರಿಸುವುದು ರೂಢಿಯಾಗಿದೆ. 1971 ಡಿಸೆಂಬರ್ 16 ರಂದು ಭಾರತವು ಪಾಕಿಸ್ತಾನದ ಮೇಲೆ ವಿಜಯ ಸಾಧಿಸಿದ ಸವಿ ನೆನಪಿಗಾಗಿ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ . ಈ ವಿಜಯದ ಹಿಂದೆ ತ್ಯಾಗ ಬಲಿದಾನದ ಮಹತ್ವದ ಕೊಡುಗೆಯಿದೆ . ವೀರ ಸೈನಿಕರ ವೀರಾವೇಶದ ಹೋರಾಟ ಅಡಕವಾಗಿದೆ ಎಂದರು .

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್ ವಿ , ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ , ದಕ್ಷಿಣ ಕನ್ನಡ ಎಸ್ಪಿ ಡಾ. ಅರುಣ್ ಕುಮಾರ್ , ಸಹಿತ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಕರ್ನಲ್ ಜಯಚಂದ್ರನ್ , ಕಾರ್ಯದರ್ಶಿಗಳಾದ ಕಾ| ದೀಪಕ್ ಅಡ್ಯಂತಾಯ , ಕರ್ನಲ್ ರಾಜೇಶ್ ಹೊಳ್ಳ , ಕರ್ನಲ್ | ಪಿಕೆ ಶೆಟ್ಟಿ , ಸುಬ್ಬೇದರ್ ಅಪ್ಪು ಶೆಟ್ಟಿ , ಸಾರ್ಜೆಂಟ್ ಭಗವಾನ್ ದಾಸ್ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!