ಕೇರಳ: ಆರೋಗ್ಯ ಇಲಾಖೆ ಯ ಆನಾರೋಗ್ಯ ದ ಬಗ್ಗೆ ಡಾ. ಯೆರಿಸ್ ಬಿಚ್ಚಿಟ್ಟ ಸತ್ಯ.

ಇದೇನಾ ನಂಬರ್ ಒನ್ ಅಭಿವೃದ್ಧಿ ? ಸಾರ್ವಜನಿಕ ರ ಯಕ್ಷ ಪ್ರಶ್ನೆ.

ತಿರುವನನಂತಪುರ : ಕಳೆದ 9 ವರ್ಷದ ನಿರಂತರವಾದ ಎಡರಂಗ ಸರಕಾರದ ಆಡಳಿತದಲ್ಲಿ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಮಾಡಿದ್ದೇವೆ ಎಂಬ ಉದ್ದಟ್ಟ ತನ ಮೆರೆಯುತ್ತಿರುವ ಸಹಕಾರಕ್ಕೆ ತಿರುವನಂತಪುರ ಮೆಡಿಕಲ್ ಕಾಲೇಜಿನ ಸರ್ಜನ್ ಡಾಕ್ಟರ್ ಹೇರಿಸ್ ಚಿರೇಕಲ್ ಬಿಚ್ಚಿಟ್ಟ ಸತ್ಯ ಆರೋಗ್ಯ ಇಲಾಖೆಯ ದುರಾವಸ್ತೆಯ ಸತ್ಯಾ ಸತ್ಯತೆಯನ್ನು ಬಯಲಿಗೆಳೆದಿದೆ.


ಇಂದು ಚುನಾವಣಾ ಸಮಯದಲ್ಲಿ ಆ ಕ್ಷೇತ್ರವನ್ನು ನನ್ನ ಪ್ರತಿಷ್ಠೆಯ ಕಣವನ್ನಾಗಿ ತನ್ನಲ್ಲೇ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಪಡುತ್ತಿರುವ ಆಡಳಿತರೂಢ ಪಕ್ಷಗಳು ಸಾಮಾನ್ಯ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ವಿಷಾದನೀಯವಾಗಿದೆ.


ತಿರುವನಂತಪುರ ಮೆಡಿಕಲ್ ಕಾಲೇಜಿನ ಸರ್ಜನ್ ಡಾಕ್ಟರ್ ಹ್ಯಾರಿಸ್ ಚಿರೇಕಲ್ ಇತ್ತೀಚಿಗೆ ತನ್ನ ಮುಖಪುಟದ ಬ್ಲಾಗ್ ನಲ್ಲಿ ತಿರುವನಂತಪುರ ಮೆಡಿಕಲ್ ಕಾಲೇಜಿನಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಶಸ್ತ್ರ ಚಿಕಿತ್ಸೆಗೆ ಬೇಕಾದ ಉಪಕರಣಗಳ ಲಭ್ಯತೆ ಇಲ್ಲದಿರುವ ಬಗ್ಗೆ ಹಾಗೂ ಮೆಡಿಕಲ್ ಕಾಲೇಜಿನ ಅನಾನುಕೂಲತೆಗಳ ಕುರಿತು ಸರಕಾರದ ಗಮನ ಸೆಳೆದಿದ್ದಾರೆ.

ಈ ಮೆಡಿಕಲ್ ಕಾಲೇಜಿನ ಈ ದುರಾವಸ್ಥೆಗೆ ವಿಷಾದ ವ್ಯಕ್ತಪಡಿಸುವ ಅವರು ಜನಸಾಮಾನ್ಯರು ಇಲ್ಲಿಗೆ ಶಸ್ತ್ರ ಚಿಕಿತ್ಸೆ ಗೆಂದು ಬಂದು ಪರದಾಡುವ ಹೃದಯವಿದ್ರಾವಾಹಕ ಚಿತ್ರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ರಾಜ್ಯದ ಹೆಚ್ಚಿನ ಸರಕಾರಿ ಆಸ್ಪತ್ರೆಗಳಲ್ಲಿ ಇಂತಹ ದುರಾವಸ್ಥೆ ಕಂಡುಬಂದರೂ, ಕೆಲವು ವೈದ್ಯರು ಸಿಬ್ಬಂದಿಗಳು ಸತ್ಯವನ್ನು ಬಯಲಿಗೆಲೆಯಲು ಹಿಂಜರಿಯುತ್ತಾರೆ. ಸತ್ಯವನ್ನು ಬಹಿರಂಗವಾಗಿ ಹೇಳಿದರೆ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಹಾಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಬೇಕಾಗಿ ಕಂಡು ಕಾಣದಂತೆ ಮಾಡುವ ವೈದ್ಯರು ಸಿಬ್ಬಂದಿಗಳಿದ್ದಾರೆ.

ರಾಜ್ಯದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಈಗಲೂ ತಾಂಡವ ವಾಡುತ್ತಿತ್ತು ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಯಲ್ಲೂ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲವೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮುಖ್ಯಮಂತ್ರಿ ಪೀನರಾಯ್ ವಿಜಯನ್ ಮಾತನಾಡುತ್ತಾ ಕೇರಳವು ಆರೋಗ್ಯ ರಂಗದಲ್ಲಿ ನಂಬರ್ 1 ಸ್ಥಾನದಲ್ಲಿದೆ ಎಂದು ಘಂಟಾಘೋಷವಾಗಿ ಹೇಳಿದ್ದು, ಡಾಕ್ಟರ್ ಹ್ಯಾರಿಸ್ ಅವರ ಮುಖಪುಟದ ಬ್ಲಾಗ್ ಸ್ಟೋರಿ ಎಲ್ಲರ ಒಂದೇ ಪ್ರಶ್ನೆ ಇದೇನಾ ನಂಬರ್ ಒನ್ ಎಂದು?.
ಸರಕಾರಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ಸಿಬ್ಬಂದಿಗಳ ನೇಮಕಾತಿ, ಉಪಕರಣಗಳ ಆಯ್ಕೆ ಇತ್ಯಾದಿ ವಿಷಯಗಳ ಕುರಿತಾಗಿ ಮೆಡಿಕಲ್ ಬೋರ್ಡ್ ಅಧಿಕೃತರು ಮಾತ್ರ ನಿರ್ಧಾರ ಕೈಗೊಳ್ಳಬೇಕಿದ್ದು ಇದರಲ್ಲಿ ಆಡಳಿತ ರೂಢಪಕ್ಷದ ಸದಸ್ಯರ ಹಸ್ತಕ್ಷೇಪವೇ ಈ ರೀತಿಯ ಅವ್ಯವಸ್ಥೆಗೆ ಕಾರಣವಾಗುತ್ತಿದೆ ಎಂಬುದು ಕೆಲವರ ವಾದವಾಗಿದೆ.

ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಯಾವುದೇ ಮಾಹಿತಿ ಇಲ್ಲದ ಸ್ಥಳೀಯ ರಾಜಕೀಯ ನಾಯಕರ ಪ್ರಭಾವವನ್ನು ಮಟ್ಟಹಾಕಿ ಎಲ್ಲಾ ಇಲಾಖೆ ಯಲ್ಲೂ ಪಾರದರ್ಶಕತೆಯನ್ನು ಕೈಗೊಳ್ಳಬೇಕಿದೆ.
ಇನ್ನಷ್ಟು ವೈದ್ಯಾಧಿಕಾರಿಗಳು ಆರೋಗ್ಯ ಇಲಾಖೆಯ ನಗ್ನ ಸತ್ಯವನ್ನು ಬಯಲಿಗೆಲೆಯುವುದಕ್ಕೆ ಮೊದಲು ಸರಕಾರವು ಎಚ್ಚೆತ್ತುಕೊಂಡರೆ ಬೀಸುವ ದೊಣ್ಣೆಯಿಂದ ಪಾರಾಗಬಹುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!