ವಿ.ವಿ. ಪಠ್ಯ ಕ್ರಮದಲ್ಲಿ ವೇಡನ್ ಗೀತೆ. ಅಳವಡಿಕೆ ಗೆ ಮಾನದಂಡವೇನು.?ಸ್ಪಷ್ಟನೆ ಕೇಳಿದ ಚಾನ್ಸ್ಲರ್

ತೀರಾ ಕಡುಬಡತನ ದಿಂದ ಅವಿರತ ಶ್ರಮ ದೊಂದಿಗೆ ಯಾವುದಾದರು ಕ್ಷೇತ್ರ ದಲ್ಲಿ ವಿಶಿಷ್ಟ ಸಾಧನೆ ಮಾಡಿದ ಪ್ರತಿಭಾನ್ವಿತ ಸಾಧಕರ ಕುರಿತಾಗಿ ಅವರ ಸಾಧನೆಯ ಬಗ್ಗೆ ಶಾಲಾ ಕಾಲೇಜು ಪಠ್ಯಪುಸ್ತಕದಲ್ಲಿ ಸೇರಿಸಿ ಮುಂದಿನ ಜನಾಂಗಕ್ಕೆ, ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ವಾಗುವಂತೆ ಮಾಡುವುದು ಉತ್ತಮ ಕಾರ್ಯವಾಗಿದೆ.


ಆದರೆ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ 2025-26 ನೇ ಶೈಕ್ಷಣಿಕ ವರ್ಷದ ವಿವಿ ಪಠ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದಿಂದ ಬಂದ ವಿಶಿಷ್ಟ ಪ್ರತಿಭೆಯ ಕಲಾವಿದ ಹರಿದಾಸ್ ಮುರಳಿ @ ವೇಡನ್ ಇತ್ತೀಚೆಗೆ ಹಾಡಿ ತುಂಬಾ ಜನಪ್ರಿಯ ವಾದ ಹಾಡೊಂದನ್ನು ಸೇರಿಸಲು ನಿರ್ಧರಿಸಿದ್ದು ಉಚಿತ ವಾಗಿದೆ.

ಬುಡಕಟ್ಟು ಸಮುದಾಯದಿಂದ ಬಂದ ಈ ಪ್ರತಿಭೆ ಯ ಬಗ್ಗೆ ಪಠ್ಯ ಪುಸ್ತಕ ದಲ್ಲಿ ಸೇರಿಸಿದ್ದು ಸರಿ, ಆದರೆ ಇದೀಗ ವ್ಯಾಪಕ ಚರ್ಚೆ ಯಾಗುತ್ತಿರುವ ವಿಷಯ ಪಠ್ಯ ಗಳಲ್ಲಿ ಸೇರಿಸಲು ಯಾವೆಲ್ಲಾ ಮಾನದಂಡಗಳಿಗೆ ಎಂದು. ಯಾಕೆಂದರೆ ವೇಡನ್ ಎಂಬ ಕಲಾವಿದ ಅಮಲು ಪದಾರ್ಥ ಸೇವನೆ ಹಾಗೂ ಹುಲಿ ಉಗುರಿನ ಪ್ರಕರಣ ದಲ್ಲಿ ಆರೋಪಿ ಯಾಗಿದ್ದು, ಇದನ್ನು ಸ್ವತ ವೇಡನ್ ಒಪ್ಪಿದ್ದಾರೆ.

ಇಂತಹ ಆರೋಪ ಇರುವ ಕಲಾವಿದ ರ ಬಗ್ಗೆ ಗಿನ ಪಾಠ ವನ್ನು ವಿದ್ಯಾರ್ಥಿಗಳು ಓದಿ ಕಲಿತರೆ ಮುಂದೆ ವಿದ್ಯಾರ್ಥಿಗಳ ಗತಿ ಏನು ? ಎಂದು ಕೆಲವರ ವಾದ ವಾಗಿದೆ. ಈ ಮದ್ಯೆ ವೇಡನ್ ಕುರಿತಾಗಿ ಪಠ್ಯ ಪುಸ್ತಕ ದಲ್ಲಿ ಅಳವಡಿಕೆ ಯ ಬಗ್ಗೆ ರಾಜ್ಯಪಾಲರು ವಿವಿ ಯಿಂದ ಸ್ಪಷ್ಟಿ ಕರಣ ಕೇಳಿದ್ದಾರೆ. ಯಾವುದೇ ಸಾಧಕರ ವ್ಯಕ್ತಿ ಚಿತ್ರಣ ವೂ ಮುಂದಿನ ಸಮಾಜಕ್ಕೆ ಪೂರಕ ವಾಗಿದ್ದರೆ ಮಾತ್ರ ಅವರ ಸಾಧನೆ ಯನ್ನು ಪಠ್ಯ ದಲ್ಲಿ ಅಳವಡಿಸಬೇಕೆಂದು ಸಾರ್ವತ್ರಿಕ ಅಭಿಪ್ರಾಯ ವಾಗಿದೆ. ಪಠ್ಯ ಪುಸ್ತಕ ದಲ್ಲಿ ಸಾಧಕರ ಪಠ್ಯ ಸೇರ್ಪಡೆ ಗೊಳಿಸುವಾಗ ಅದರಲ್ಲಿ ರಾಜಕೀಯ ಹಾಗೂ ಸ್ಥಾಪಿತ ಹಿತಾಶಕ್ತಿ ಗಳ ಕೈವಾಡ ಇರಬಾರದು.. ವೇಡನ್ ಪ್ರಸ್ತುತ ಆರೋಪ ಗಳಿಂದ ಮುಕ್ತ ರಾದರೆ ಮತ್ತೆ ಅವರ ಬಗ್ಗೆ ಹಾಗೂ ಅವರ ಹಾಡಿ ನ ಬಗ್ಗೆ ಪಠ್ಯ ಮಾಡಬಹುದಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!