ಮಾನ್ಯ ವಿಷ್ಣುಮೂರ್ತಿ ನಗರದಲ್ಲಿ ಪ್ರಾಚೀನ ದೇವಾಲಯದ ಕುರುಹು ಪತ್ತೆ; ಪುನರುತ್ಥಾನಕ್ಕೆ ಸಿದ್ಧತೆ

ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ವಿಷ್ಣುಮೂರ್ತಿ ನಗರದಲ್ಲಿ ನೂರಾರು ವರ್ಷಗಳಷ್ಟು ಪ್ರಾಚೀನವೆನ್ನಲಾದ ದೇವಾಲಯದ ಕುರುಹು ಪತ್ತೆಯಾಗಿದೆ. ವಿಷ್ಣುಮೂರ್ತಿ ನಗರದ ವಿಶಾಲ ಬಯಲಲ್ಲಿ ಎರಡು ಮರಗಳ ಎಡೆಯಲ್ಲಿ ದೇವಾಲಯ ದ್ದೆನ್ನಲಾದ ಪಾಣಿಪೀಠದ ಭಾಗಗಳು ಮತ್ತು ಬಾವಿಯ ಕುರುಹುಗಳು ಕಂಡುಬಂದಿದೆ. ಈ ಪರಿಸರದಲ್ಲಿ ವಿಷ್ಣುಮೂರ್ತಿ ದೈವದ ಆರಾಧನೆ ನಡೆದುಬರುತ್ತಿದ್ದು, ಅದೇ ಪರಿಸರದಲ್ಲಿ ದೇವಾಲಯದ ಕುರುಹುಗಳು ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈಗ ದೇವಾಲಯದ ಪುನರುತ್ಥಾನಕ್ಕೆ ಸಂಬAಧಿಸಿ ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಕೈಗೆತ್ತಿಕೊಳ್ಳಲಾಗಿದೆ. ದೈವಜ್ಞರಾದ ಮಹಾಲಿಂಗೇಶ್ವರ ಶರ್ಮ ಕೊಳಚ್ಚಪ್ಪೆ ಉಣ್ಣಿಕೃಷ್ಣನ್ ನಂಬೀಶ ಸಹಕಾರದಲ್ಲಿ ಚಿಂತನೆ ಆರಂಭಗೊಂಡಿದೆ.

ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಉಪಸ್ಥಿತರಿದ್ದರು. ಕ್ಷೇತ್ರ ಪುನರುತ್ಥಾನಕ್ಕೆ ತಾತ್ಕಾಲಿಕ ಸಮಿತಿಗೆ ರೂಪು ನೀಡಲಾಗಿದ್ದು ಶ್ರೀಕೃಷ್ಣ ಭಟ್ ಪುದುಕೋಳಿ, ರಾಮ ಕೆ.ಕಾರ್ಮಾರು, ಮಹೇಶ್ ವಳಕ್ಕುಂಜ, ಮೋಹನ ಮಾನ್ಯ, ವೆಂಕಟ್ರಮಣ ಸಿ.ಎಚ್., ಮಂಜುನಾಥ ಡಿ.ಮಾನ್ಯ, ರವಿಶಂಕರ ಮಾನ್ಯ, ಸುಂದರ ಶೆಟ್ಟಿ ಕೊಲ್ಲಂಗಾನ, ಸಂತೋಷ್ ಕುಮಾರ್ ಎಸ್. ಮಾನ್ಯ, ವೇಣುಗೋಪಾಲ ತತ್ವಮಸಿ, ಶ್ರೀನಿವಾಸ ಕೊಡಗಿ ಮಾನ್ಯ, ನವೀನಚಂದ್ರ ಎಂ.ಎಸ್.ಮಾನ್ಯ ನೇತೃತ್ವ ವಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!