ಕಾಸರಗೋಡು : ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕನ್ನಡದ ಕಟ್ಟಾಳುಗಳನ್ನು ಪರಸ್ಪರ ಜೋಡಿಸುವುದೇ “ಮನೆ ಮನೆ -ಕನ್ನಡ ಜಾಗೃತಿ ಅಭಿಯಾನದ ಪ್ರದಾನ ಉದ್ದೇಶ. ಕನ್ನಡ ಮನಸುಗಳು ಒಂದಾಗಬೇಕು. ಕನ್ನಡ ಪ್ರಜ್ಞೆ ಹೊಸ ತಲೆಮಾರಿನಲ್ಲಿ ಬೆರೂರಿಸುವ ಪ್ರಯತ್ನಕ್ಕೆ, ಕವಿಗಳು, ಸಾಹಿತಿಗಳು, ಕಲಾವಿದರು, ಸಂಘಟಕರು ಒಂದಾಗಿ ಸೇರಿ ಚರ್ಚಿಸುವ ವೇದಿಕೆ ನಿರ್ಮಾಣವಾಗಬೇಕು. ಹೊಸ ಹೊಸ ಯೋಚನೆ -ಯೋಜನೆಗಳ ಮೂಲಕ ಒಟ್ಟಾಗಿ ಕನ್ನಡ ಉಳಿಸುವ, ಬೆಳೆಸುವ ಪ್ರಯತ್ನಕ್ಕೆ ಪ್ರತಿಜ್ಞಾಬದ್ಧರಾಗಬೇಕು ಎಂದು ಕನ್ನಡ ಭವನ ಮತ್ತು ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಹೇಳಿದರು.
ಇವರು ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮತ್ತು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ನಡೆದ “ಮನೆ ಮನೆ -ಕನ್ನಡ ಜಾಗೃತಿ ಅಭಿಯಾನದ ದ್ವಿತೀಯ ಕಾರ್ಯಕ್ರಮ ದ. ಕ. ಜಿಲ್ಲಾ ಅಧ್ಯಕ್ಷರಾದ ಸಾಹಿತಿ ಡಾ. ಗೋವಿಂದ ಭಟ್ ಕೊಲಚಪ್ಪೆ ಇವರ ಮಂಗಳೂರಿನ ನಿವಾಸದಲ್ಲಿ 27.7.2025,ಭಾನುವಾರ ಅಪರಾಹ್ನ ನಡೆಯಿತು.
ಕಾರ್ಯಕ್ರಮ ಸಂಯೋಜಕರಾದ ಡಾ. ಕೊಲಚಪ್ಪೆ ಗೋವಿಂದ ಭಟ್,ಸಾಹಿತಿ ಪ್ರಕಾಶಕ ಕಲ್ಲಚ್ಚು ಮಹೇಶ್ ಆರ್ ನಾಯಕ್ ಅಧ್ಯಕ್ಷತೆ ವಹಿಸಿದರು.