ಕೇರಳ ಕಾಂಗ್ರೆಸ್ ನಲ್ಲಿ ಅಶ್ಲೀಲಾ ಸಂದೇಶ ವಿವಾದ. ಇಕ್ಕಟ್ಟಿನಲ್ಲಿ ಕೆಪಿಸಿಸಿ..ಶಿಸ್ತು ಕ್ರಮಕ್ಕೆ ಆಗ್ರಹಿಸಿ ವಿಪಕ್ಷ ಗಳಿಂದ ವ್ಯಾಪಕ ಪ್ರತಿಭಟನೆ.ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್

ತಿರುವನಂತಪುರಂ : ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ ಹಾಗೂ ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯ ಪೂರ್ವ ತಯಾರಿಯಲ್ಲಿದ್ದ ರಾಜ್ಯ ಕಾಂಗ್ರೆಸ್ ಸಮಿತಿಗೆ ಯುವ ಕಾಂಗ್ರೆಸ್ ಅಧ್ಯಕ್ಷರ ಅಶ್ಲೀಲಾ ಸಂದೇಶ ವಿವಾದ ತೀವ್ರ ಮುಜುಗರ ಉಂಟು ಮಾಡಿದ್ದೂ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಉಭಯ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಪ್ರಚಾರ ಕಾರ್ಯದಲ್ಲಿ ಇದೊಂದು ಅಸ್ತ್ರವಾಗಲಿದೆ ಎಂಬ ಆತಂಕ ಕೆಪಿಸಿಸಿ ಗೆ ಇದೆ.

ಯುವ ನಟಿ ಹಾಗೂ ಮಾಜಿ ಮಾಧ್ಯಮ ಪ್ರತಿನಿಧಿ ಯಾದ ಯುವತಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲಾ ಸಂದೇಶ ಕಳುಹಿಸಿ ವಸತಿ ಗೃಹಕ್ಕೆ ಬರುವಂತೆ ಒತ್ತಾಯಿಸಿದ ಪಾಲಕ್ಕಾಡು ಶಾಸಕ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮಾಂಗೋಟತಿಲ್ ಇದೀಗ ವಿವಾದದ ಕೇಂದ್ರ ಬಿಂದು ವಾಗಿದ್ದಾರೆ .ಹೈ ಕಮಾಂಡ್ ಈ ವಿಷಯದಲ್ಲಿ ಗರಂ ಆಗಿದ್ದು ನಿರ್ದಾಕ್ಷಣ್ಯ ಶಿಸ್ತು ಕ್ರಮಕ್ಕೆ ಕೆಪಿಸಿಸಿಗೆ ಸೂಚನೆ ನೀಡಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ ಡಿ ಸತೀಶನ್ ,ಆರೋಪಿ ಯಾರಾಗಿದ್ದರೂ ಶಿಸ್ತು ಕ್ರಮ ಕೈ ಗೊಳ್ಳಲಾಗುವುದು ,ಆರೋಪ ಮಾಡಿದ ಯುವತಿ ತನ್ನ ಮಗಳಿಗೆ ಸಮಾನ ವಾಗಿದ್ದು,ಪಕ್ಷದಲ್ಲಿ ಅಶಿಸ್ತು ತೋರಿಸುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈ ಗೊಳ್ಳಲಾಗುವುದೆಂದು ತಿಳಿಸಿದ್ದಾರೆ.ಯುವ ಕಾಂಗೆಸ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷ ಸೂಚಿಸಿದೆ.ಶಾಸಕ ಸ್ಥಾನದಲ್ಲಿ ಮುಂದುವರಿದರೂ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ದಿಸಲು ಪಕ್ಷ ಟಿಕೆಟ್ ನೀಡುವುದಿಲ್ಲವೆಂದು ತಿಳಿಸಿದ್ದಾರೆ.

ಆಡಳಿತ ರೂಢ ಎಡರಂಗ ,DYFI ,SFI ,BJP ಸಹಿತ ಎಲ್ಲಾವಿರೋಧ ಪಕ್ಷಗಳು ರಾಹುಲ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಗೆ ಸಜ್ಜಾಗುತ್ತಿದೆ.ಚುನಾವಣೆಯ ಸನಿಹದಲ್ಲಿರುವಾಗ ರಾಜ್ಯ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದ್ದು ,ಹೈ ಕಮಾಂಡ್ ಕೆಪಿಸಿಸಿ ಯಿಂದ ಸ್ಪಷ್ಟೀಕರಣ ಕೇಳಿದೆ.ನಟಿಯ ಹೇಳಿಕೆಯ ನಂತರ ವಿವಾದ ಭುಗಿಲೆದ್ದಿದ್ದು ರಾಜ್ಯ ಕಾಂಗ್ರೆಸ್ ನಾಯಕರಿಂದ ಸ್ಪಷ್ಟೀಕರಣ ಕೇಳಿರುವ ಹೈ ಕಮಾಂಡ್ ಯಾವ ರೀತಿಯ ಶಿಸ್ತು ಕ್ರಮಕ್ಕೆ ನಿರ್ದೇಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!