ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ದಾರುಸ್ಸಲಾಮ್ ಚಾರಿಟೇಬಲ್ ವಿಂಗ್ ನ ನೂತನ ಕಾರ್ಯಾಲಯದ ಉದ್ಘಾಟನೆ

ಮಂಜೇಶ್ವರ: ಕಲೆ ಕ್ರೀಡೆ ಜೀವ ಕಾರುಣ್ಯ ಕಾರ್ಯಾಗಾರದಲ್ಲಿ ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ದಾರುಸ್ಸಲಾಮ್ ಚಾರಿಟೇಬಲ್ ವಿಂಗ್ ಗೆ 32 ನೇ ವರ್ಷ ಕ್ಕೆ ನೂತನ ಕಾರ್ಯಾಲಯವು 16 -01 -2026 ನೇ ಶನಿವಾರದಂದು ಉದ್ಘಾಟನೆಗೊಂಡಿತು.


ಮಂಜೇಶ್ವರ ಪೊಯ್ಯಕಂಡದಲ್ಲಿ ನಿರ್ಮಿಸಲಾದ ನೂತನ ಕಾರ್ಯಾಲಯದ ಕಟ್ಟಡವನ್ನು ಮಂಜೇಶ್ವರದ ಶಾಸಕರಾದ ಎ.ಕೆ .ಎಂ ಅಶ್ರಫ್ ರವರು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಿರ್ಮಾಪಕ , ಅಸ್ತ್ರ ಗ್ರೂಪ್ ನ CEO ಲಂಚುಲಾಲ್ ಉಪಸ್ಥಿತರಿದ್ದರು .


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಶ್ರಫ್ ರವರು ಚಿಕ್ಕರೀತಿಯಲ್ಲಿ ಆರಂಭಿಸಿದ ಈ ಸಂಸ್ಥೆ ಕಲೆಗೂ, ಕ್ರೀಡೆಗೂ ಪ್ರೋತ್ಸಾಹ ನೀಡುತ್ತಾ ಜೀವ ಕಾರುಣ್ಯಕ್ಕೂ ಒತ್ತು ನೀಡಿ
ಹಲವರ ಜೀವನದಲ್ಲಿ ಬೆಳಕಾದ ಸಂಸ್ಥೆ ಇದಾಗಿದ್ದು, ತಮ್ಮ ದೈನಂದಿನ ಜೀವನೋಪಾಯಕ್ಕೆ ಮೀನುಗಾರಿಕೆ , ಇನ್ನಿತರ ಉದ್ಯೋಗವನ್ನು ಮಾಡುತ್ತ ತಮಗೆ ಲಭಿಸುವ ಕೆಲವೇ ಸಮಯಗಳನ್ನು ಈ ಸಂಸ್ಥೆಗೆ ಬೇಕಾಗಿ ಕಳೆಯುವ ಯುವ ಜನಾಂಗದ ಕನಸು ಇಂದು ನನಸಾಗಿದೆ . ಇದಕ್ಕಾಗಿ ಕೈ ಜೋಡಿಸಿದ ಹಲವು ದಾನಿಗಳು ಇದ್ದಾರೆ.ಅವರಿಗೂ ಮತ್ತು ಸಂಸ್ಥೆ ಕಟ್ಟಿ ಬೆಳೆಸಿದ ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.


ನಾನು ಅಡಿ ಬೆಳೆದ ಜಾಗ ಇದಾಗಿದ್ದು ಅಂತ ಜಾಗದಲ್ಲಿ ಮಹತ್ತರ ಕಾರ್ಯವನ್ನು ಮಾಡುತ್ತಿರುವ ಲಕ್ಕಿ brothers ರವರ ನೂತನ ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನಿಸಿದ ಎಲ್ಲರಿಗೂ ವಂದನೆ ಅರ್ಪಿಸಿದರು. ಮತ್ತು ಮುಂದಿನ ಕಾರ್ಯಕ್ಕ್ರಮಗಳಿಗೆ ಶುಭವಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ
ಖತೀಬ್ ಉಸ್ತಾದ್ , ಬ್ಲಾಕ್ ಪಂಚಾಯತ್ ಪ್ರೆಸಿಡೆಂಟ್ ಸೈಫುಲ್ಲಾ ತಂಗಳ್ , ಪಂಚಾಯತ್ ಪ್ರೆಸಿಡೆಂಟ್ ಬಶೀರ್ ಕನಿಲ ಹಾಗು ಹಲವು ಗಣ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!