ಕಾಸರಗೋಡು :ಕಾಸರಗೋಡಿನ ಕಬಡ್ಡಿ ಇತಿಹಾಸದಲ್ಲಿ ದಾಖಲೆಯನ್ನು ನಿರ್ಮಿಸಿದ ಶ್ರೀ ಅಯ್ಯಪ್ಪ ಕೃಪಾ ವೀರಮಾರುತಿ ವ್ಯಾಯಾಮ ಶಾಲೆ (ರಿ.), ಹೊಸಂಗಡಿ ಇವರ ವತಿಯಿಂದ ರಾಷ್ಟ್ರ ಮಟ್ಟದ A ಗ್ರೇಡ್ ಕಬಡ್ಡಿ ಕ್ರೀಡಾಕೂಟವು ದಿನಾಂಕ ಫೆಬ್ರವರಿ 1, 2026 ರಂದು ಆಯೋಜಿಸಲಾಗಿದೆ.ಕಬಡ್ಡಿ ಕ್ರೀಡಾಕೂಟವು ವೀರಮಾರುತಿ ವ್ಯಾಯಾಮ ಶಾಲೆ ಪರಿಸರದಲ್ಲಿ ನಡೆಯಲಿದ್ದು, ಕಾಸರಗೋಡು ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ.
ಈ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಪ್ರೊ ಕಬಡ್ಡಿ ಆಟಗಾರರು ಸೇರಿದಂತೆ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಆಟಗಾರರು 8 ಬಲಿಷ್ಠ ತಂಡಗಳಲ್ಲಿ ಭಾಗವಹಿಸಲಿಸಲಿದ್ದಾರೆ .
ಕ್ರೀಡಾಕೂಟದ ವಿಜೇತ ತಂಡಗಳಿಗೆ
ಪ್ರಥಮ ಬಹುಮಾನ : ₹50,000
ದ್ವಿತೀಯ ಬಹುಮಾನ : ₹30,000
ತ್ರಿತೀಯ ಮತ್ತು ಚತುರ್ಥ ಬಹುಮಾನ : ತಲಾ ₹10,000
ಇವುಗಳ ಜೊತೆಗೆ ಶಾಶ್ವತ ಫಲಕವನ್ನು ಪ್ರದಾನ ಮಾಡಲಾಗುವುದು.
ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.