ಮಂಜೇಶ್ವರ : ಕಾರು ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಬೈಕ್ ಸವಾರ ಬೇಳ ಪೆರಿಯಡ್ಕ ನಿವಾಸಿ ಶಶಿಕುಮಾರ್ (24) ಹಾಗೂ ಕಿಣ್ಣಂಗಾರಿನ ಕಿರಣ್ ರಾಜ್ (27) ಎಂಬಿವರನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂಬಳೆ ಕೃಷ್ಣ ಭವಣ್ ಹೋಟೆಲಿನ ಸಮೀಪದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಬ್ಬರು ಸಂಚರಿಸುತ್ತಿದ್ದ ಬೈಕ್ ಗೆ ಎದುರಿನಿಂದ ಆಗಮಿಸಿದ ಕಾರು ಡಿಕ್ಕಿ ಹೊಡೆದಿದೆ.
ರಸ್ತೆಗೆಸೆಯಲ್ಪಟ್ಟ ಇಬ್ಬರ ತಲೆಗೂ ಗಂಭೀರ ಗಾಯ ಉಂಟಾಗಿದೆ.