ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಲಾರಿ–ಬಸ್‌ನಿಂದ ಬ್ಯಾಟರಿ, ಡೀಸೆಲ್ ಕಳವು

ಮಂಜೇಶ್ವರ: ರಿಪೇರಿ ಉದ್ದೇಶಕ್ಕಾಗಿ ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಭಾರತ್ ಬೆನ್ಸ್ ಲಾರಿಗಳಿಂದ ನಾಲ್ಕು ಬ್ಯಾಟರಿಗಳು ಹಾಗೂ ಮಹಾಲಕ್ಷ್ಮಿ ಬಸ್‌ನಿಂದ ಡೀಸೆಲ್ ಕಳವು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕುಂಬಳೆ ಪೆರ್ವಾಡ್‌ನಲ್ಲಿರುವ ಎಸ್‌ಜಿ ಆಟೋ ವರ್ಕ್‌ಶಾಪ್‌ನ ಹಿಂಭಾಗದಲ್ಲಿ ಲಾರಿಗಳು ಮತ್ತು ಬಸ್ ಅನ್ನು ನಿಲ್ಲಿಸಲಾಗಿತ್ತು. ಮೊನ್ನೆ ರಾತ್ರಿ ಕಳ್ಳರು ಈ ವಾಹನಗಳನ್ನು ಗುರಿಯಾಗಿಸಿಕೊಂಡು ಕಳವು ನಡೆಸಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆ ಬೆಳಿಗ್ಗೆ ವಾಹನಗಳನ್ನು ಪರಿಶೀಲಿಸಿದ ವೇಳೆ ಬ್ಯಾಟರಿಗಳು ಹಾಗೂ ಡೀಸೆಲ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬ್ಯಾಟರಿ ಕಳವಿನಿಂದ ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ವರ್ಕ್‌ಶಾಪ್ ಮಾಲಕರು ತಿಳಿಸಿದ್ದಾರೆ. ಈ ಕುರಿತು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಳವು ನಡೆಸಿದವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!