ಮಂಜೇಶ್ವರ : ಜಿಲ್ಲೆಯಲ್ಲಿ ಪೊಲೀಸರು ಹಾಗೂ ಅಬಕಾರಿ ಇಲಾಖೆ ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭಾರೀ ಪ್ರಮಾಣದ ಮಾದಕದ್ರವ್ಯ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಮಂಗಲ್ಪಾಡಿ ಸೋಂಕಾಲ್‌ನಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ 54 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಮಂಗಲ್ಪಾಡಿ ಅಂಬಾರ್‌ಪಳ್ಳಂ ನಿವಾಸಿ ಇದ್ದೀನ್ ಕುಂಣಿ ಯಾನೆ ಇರ್ಷಾದ್ (34) ಎಂಬಾತನನ್ನು ಬಂಧಿಸಲಾಗಿದೆ.
ಇದೇ ರೀತಿ ಬೇಕಲ ಪೊಲೀಸರು ಕೋಟಿಕುಳಂ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1.894 ಕಿಲೋಗ್ರಾಂ ಗಾಂಜಾ ವಶಪಡಿಸಿಕೊಂಡು, ಪೆರಿಯ ಕುಣಿಯ ಅರಫನಗರದ ಹಬೀರ್ ರಹ್ಮಾನ್ ಎ. (37) ಎಂಬಾತನನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಮಧೂರು ಎಸ್‌ಪಿ ನಗರ–ಮುತ್ತತ್ತೋಡಿ ರಸ್ತೆ ಬಳಿ ಅಬಕಾರಿ ತಂಡ ನಡೆಸಿದ ದಾಳಿಯಲ್ಲಿ 13.22 ಗ್ರಾಂ ಎಂಡಿಎಂಎ ಹಾಗೂ 11.22 ಗ್ರಾಂ ಗಾಂಜಾ ಪತ್ತೆಯಾಗಿದ್ದು, ತಳಂಗರೆ ನಿವಾಸಿ ನೌಶಾದ್ ಪಿ.ಎನ್. (36) ವಿರುದ್ಧ ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.