ಮಂಜೇಶ್ವರ : ಯುವತಿಯ ಹೆಗಲಿಗೆ ಕೈಯಿಟ್ಟು ಚುಂಬಿಸಲು ಯತ್ನಿಸಿದ ಹಾಗೂ ಬೆದರಿಕೆ ಹಾಕಿದ ಆರೋಪದ ಮೇರೆಗೆ ಮಂಜೇಶ್ವರ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಕುಂಜತ್ತೂರು ಜಲಾಲಿ ಮಸೀದಿ ಸಮೀಪದ ಸಣ್ಣಡ್ಕ ಹೌಸ್ ನಿವಾಸಿ ಸುನಿಲ್ ಕುಮಾರ್ (38) ಬಂಧಿತ ಆರೋಪಿ. ಮಂಜೇಶ್ವರ ಎಸ್.ಐ ವೈಷ್ಣವ್ ರಾಮಚಂದ್ರನ್ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆದಿದೆ. ಜನವರಿ 26ರಂದು ಕುಂಜತ್ತೂರು ಮಾಸ್ಕೋ ಹಾಲ್ ಸಮೀಪದ ಬಸ್ ನಿಲ್ದಾಣದಲ್ಲಿ ಯುವತಿಯ ಕೈ ಹಿಡಿದು ಚುಂಬಿಸಲು ಯತ್ನಿಸಿದ ಘಟನೆ ನಡೆದಿತ್ತು. ಫೆಬ್ರವರಿ 8ರಂದು ರಾತ್ರಿ ಬದಿಯಡ್ಕ ಠಾಣಾ ವ್ಯಾಪ್ತಿಯ ತರವಾಡು ಮನೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ದೂರುದಾತೆಯನ್ನು ನಿರಂತರವಾಗಿ ಬೈಕ್‌ನಲ್ಲಿ ಹಿಂಬಾಲಿಸಿ, ಮಗನನ್ನು ಕೊಲ್ಲುವುದಾಗಿ ಬೆದರಿಸಿದ್ದ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.