ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಒಪರೇಟಿವ್ ಸೊಸೈಟಿ ಲಿಮಿಟೆಡ್ ನ ನೂತನ ಕಟ್ಟಡ ಉದ್ಘಾಟನೆ

ಮಂಜೇಶ್ವರ : ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಒಪರೇಟಿವ್ ಸೊಸೈಟಿ ಲಿಮಿಟೆಡ್ ನ ನೂತನ ಕಟ್ಟಡ ಇಂದು ಉದ್ಘಾಟನೆಗೊಂಡಿತು.


ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ನೂತನ ಕಟ್ಟಡವನ್ನು ಉಧ್ಘಾಟಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು ಇಂತಹ ಬ್ಯಾಂಕ್ ಗಳು ಗ್ರಾಹಕರಿಗೆ ವ್ಯವಹಾರಕ್ಕೆ ಸುಲಭವಾಗಿ ಕೈಗೆಟಕುವ ಸಂಸ್ಥೆಗಳಾಗಿದ್ದು ,ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗುತ್ತದೆ.ಕೆಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಅನ್ಯ ರಾಜ್ಯದ ಸಿಬ್ಬಂದಿಗಳಿರುವುದರಿಂದ ಗ್ರಾಹಕರಿಗೆ ಸಂವಹನಕ್ಕೆ ಕಷ್ಟವಾಗುತ್ತಿದ್ದು.ಇಂತಹ ಸ್ಥಳೀಯ ಬ್ಯಾಂಕ್ ಗಳು ಈ ರೀತಿಯ ಸಮಸ್ಯೆಗಳು ಇರುವುದಿಲ್ಲ.ಗ್ರಾಹಕರಿಗೆ ಸಂವಹನದ ಜೊತೆಗೆ ವ್ಯವಹಾರಗಳಿಗೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಬಾಲಕೃಷ್ಣನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ಸಹಕಾರಿ ಸಂಘಗಳ ಡೆಪ್ಯುಟಿ ರಿಜಿಸ್ಟರ್ ಚಂದ್ರನ್ ವಿ , ಕೋಪರೇಟಿವ್ ಯೂನಿಯನ್ ಚಯರ್ ಮ್ಯಾನ್ ಕೆ ಆರ್ ದಯಾನಂದ , ಮಿಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ,ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್ ,ಕೋ ಪರೇಟಿವ್ ಸೊಸೈಟಿ ಅಸಿಸ್ಟಂಟ್ ರಿಜಿಸ್ಟರ್ ರವೀಂದ್ರ ಎ , ಶ್ರೀ ಮೊಹಮ್ಮದ್ ಸಾಲಿ ಕೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ, ಶ್ರೀ ಅಬೂಬಕರ್ ಸಿದ್ದಿಕ್ ಪಾಡಿ, ಶ್ರೀ ಮೊಯಿದೀನ್ ಕು0ಞ,ಶ್ರೀ ಬಾಬು ಸಿ ಕುಳೂರು,ಶ್ರೀ ಇಬ್ರಾಹಿಂ ,ಶ್ರೀ ಬೈಜುರಾಜ್ ,ಶ್ರೀ ರಾಮಚಂದ್ರ ಎಸ್ ,ಶ್ರೀ ಮೋಹನ ಬಿ,ಶ್ರೀ ಮೊಹಮದ್ ಹನೀಫ್ ,ಶ್ರೀ ಶಾಂತಾರಾಮ ಶೆಟ್ಟಿ,ಶ್ರೀ ರಘುನಾಥ ಶೆಟ್ಟಿ ,ಶ್ರೀ ಕೃಷ್ಣಮೂರ್ತಿ ಎನ್,ಶ್ರೀ ಪ್ರಭಾಕರ ಶೆಟ್ಟಿ,ಶ್ರೀ ವಿ ವಿ ರಮೇಶನ್ ,ಶ್ರೀ ರಾಮಕೃಷ್ಣ ಕಡಂಬಾರ್,ಶ್ರೀ ಪುರುಷೋತ್ತಮ ಅರಿಬೈಲು ,ಶ್ರೀ ಅಬೂಬಕರ್ ಪಿ ವಿ ,ಶ್ರೀ ಸಾಜಿ ಸೆಬಾಸ್ಟಿಯನ್ ,ಶ್ರೀ ದೂಮಪ್ಪ ಶೆಟ್ಟಿ ತಾಮರು ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಈ ಸಂಧರ್ಭದಲ್ಲಿ ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಒಪರೇಟಿವ್ ಸೊಸೈಟಿ ಲಿಮಿಟೆಡ್ ನ ಸ್ಥಾಪಕ ಅಧ್ಯಕ್ಷರಾದ ಶ್ರೀ ಸದಾನಂದ ಶೆಟ್ಟಿ ಮತ್ತು ಸ್ಥಾಪಕ ಕಾರ್ಯದರ್ಶಿ ಶ್ರೀ ಡಿ ಬೂಬ ರವರನ್ನು ಗೌರವಿಸಲಾಯಿತು.ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಒಪರೇಟಿವ್ ಸೊಸೈಟಿ ಲಿಮಿಟೆಡ್ ನ ಅಧ್ಯಕ್ಷ ಶ್ರೀ ವಿಶ್ವನಾಥ ಕುದುರು ಸ್ವಾಗತಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!