ಮಂಜೇಶ್ವರ : ಅಪ್ರಾಪ್ತ ಬಾಲಕಿಯ ಮುಂದೆ ನಗ್ನತೆ ಪ್ರದರ್ಶಿಸಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.ರಾಜಪುರಂ ನಿವಾಸಿ ಅರ್ಶಾದ್ (35) ಬಂಧಿತ ಆರೋಪಿ. ಕುಂಬಳೆ ಪೊಲೀಸರ ತಂಡ ಕರ್ನಾಟಕದಿಂದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ.
ಅರ್ಶಾದ್ ಕರ್ನಾಟಕದಿಂದ ಹಣ್ಣು–ಹಂಪಲುಗಳನ್ನು ತಂದು ಕಾಞಂಗಾಡ್ ಭಾಗದಲ್ಲಿ ಮಾರಾಟ ಮಾಡುತ್ತಿದ್ದನು. ಕಳೆದ ಜನವರಿ 8ರಂದು ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಎದುರು ಅಶ್ಲೀಲವಾಗಿ ವರ್ತಿಸಿದ್ದಾನೆ ಎಂಬ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮಡಿಕೇರಿ, ಕೊಡಗಿನಲ್ಲಿ ಇರುವುದಾಗಿ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.