ಮಂಗಳೂರು:ಯಕ್ಷ ಪ್ರತಿಭೆ” ಮಂಗಳೂರು ಇದರ 17ನೇ ವರ್ಷದ ಸಂಭ್ರಮ , ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಕರಣಾ ಪ್ರಶಸ್ತಿ ಪ್ರಧಾನ ಮತ್ತು ಅಭಿನಂದನಾ ಕಾರ್ಯಕ್ರಮವು ನವೆಂಬರ್ 29ರಂದು ಸಂಜೆ 5.45ರಿಂದ ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾವಿದರಾದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ , ಈ ವರುಷದ “ಯಕ್ಷ ಪ್ರತಿಭೆಯಿಂದ ಕೊಡ ಮಾಡುವ “ಸಾಧಕ ರತ್ನ” ಪ್ರಶಸ್ತಿಯನ್ನು ದಕ್ಷಿಣ ಕನ್ನಡದ ಹೆಮ್ಮೆಯ ಕುವರ ಅದಾನಿ ಗ್ರೂಪ್‌ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವರಿಗೆ ನೀಡಲಾಗುವುದು . ಹಿರಿಯ ಹಾಗೂ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರುರವರಿಗೆ “ಕಾಯಕ ರತ್ನ” ಎಂಬ ಬಿರುದಿನೊಂದಿಗೆ ಗೌರವಿಸಲಾಗುವುದೆಂದು ಹಾಗೂ ಯಕ್ಷ ಸನ್ಮಾನ ವನ್ನು ಯಕ್ಷಗಾನ ಹಾಗೂ ತಾಳಮದ್ದಳೆ ಕ್ಷೇತ್ರದ ಪ್ರತಿಭಾವಂತ ಕಲಾವಿದ ಸದಾಶಿವ ಆಳ್ವ ತಲಪಾಡಿ ಇವರನ್ನು, ಯುವಪ್ರತಿಭೆ ವಾರುಣಿ ನಾಗರಾಜ ಆಚಾರ್ಯ ಮಂಗಳಾದೇವಿ ಇವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದೆಂದು ತಿಳಿಸಿದರು .
ಈ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಪೀಕರ್ ಯು. ಟಿ. ಖಾದರ್ ಮಾಡಲಿದ್ದಾರೆ . ಪೂಜ್ಯ ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ ಅನುಗ್ರಹ ಆಶೀರ್ವಾಚನ ಶುಭನುಡಿ ನೀಡಲಿದ್ದಾರೆ. ಸಭಾ ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ ಕಾಮತ್ ವಹಿಸಲಿದ್ದಾರೆ . ಗೌರವ ಪ್ರಶಸ್ತಿ, ಗೌರವಾಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು ನಡೆಸಿಕೊಡುತ್ತಾರೆ . ಈ ಸಂದರ್ಭದಲ್ಲಿ ಗಣ್ಯರು ಉಪಸ್ಥಿತಿಯಲ್ಲಿ ಇರಲಿದ್ದಾರೆ . ಈ ಕ್ಷಣ ಅಗಲಿದ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯರ ಸ್ಪರಣೆಯನ್ನು ಈ ಕ್ಷಣ ಮಾಡಲಾಗುವುದು . ಸಭಾ ಕಾರ್ಯಕ್ರಮಮದ ಬಳಿಕ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು .ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ನ್ಯಾ . ಮೋಹನ ದಾಸ್ ರೈ , ರವಿ ಅಲೆವೂರು , ಅಶೋಕ್ ಶೆಟ್ಟಿ , ಸುಜಾತ ಆಳ್ವ ಉಪಸ್ಥಿತರಿದ್ದರು .