ಮಿಯಾಪದವು : ಯು.ಡಿ.ಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಅವರ ಕ್ಷೇತ್ರ ಪರ್ಯಟನೆಎರಡನೇ ದಿನವೂ ಭಾರೀ ಉತ್ಸಾಹದಿಂದ ಮುಂದುವರಿಯಿತು.
ಎ.ಕೆ.ಎಂ ಅಶ್ರಫ್ ಅವರು ಮೀoಜಾ ಹಾಗೂ ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಪರ್ಯಟನೆ ನಡೆಸಿದರು. ಬೆಳಗ್ಗೆ ದೈಗೋಳಿ ಪ್ರದೇಶದಿಂದ ಆರಂಭವಾದ ಈ ಪರ್ಯಟನೆ ಮಜೀರ್ಪಳ್ಳ, ಗಾಂಧಿನಗರ, ಮದಂಕಲ್, ಮಿಯಾಪದವು, ಚಿಗುರುಪಾದೆ , ಬಾಳಿಯೂರು, ಮೂಡಂಬೈಲ್ , ಕಡಂಬಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚರಿಸಿ ಕಡಂಬಾರ್‌ನಲ್ಲಿ ಸಮಾರೋಪಗೊಂಡಿತು .
ಮಧ್ಯಾಹ್ನದ ನಂತರ ಲಾಲ್‌ಬಾಗ್, ಬಾಯಾರಪದವು, ಸಿರಂತಡ್ಕ, ಸುಂಕದಕಟ್ಟೆ , ಕುರುಡಪದವು, ಮುಳಿಗದ್ದೆ, ಪೆರೋಡಿ, ಬಳ್ಳೂರು, ಕನಿಯಾಲ, ಚೇರಾಲ್, ಸಜನ್ಕಿಲ, ಧರ್ಮತ್ತಡ್ಕ, ಪೆರ್ಮುದೆ, ಸುಬ್ಬಯ್ಯಕಟ್ಟ, ಕಯ್ಯಾರ್ ವಿಲೇಜ್, ಕೊಕ್ಕಚ್ಚಾಲ್, ಜೊಡ್ಕಲ್, ಬಾಯಿಕ್ಕಟ್ಟ ಮೊದಲಾದ ಪ್ರದೇಶಗಳಲ್ಲಿ ಪರ್ಯಟನೆ ನಡೆಸಿ ಪೈವಳಿಕೆಯಲ್ಲಿ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಯು.ಡಿ.ಎಫ್ ಮಂಡಲ ಅಧ್ಯಕ್ಷ ಅಜೀಸ್ ಮೆರಿಕ್ಕೆ, ಸಂಚಾಲಕ ಮಂಜುನಾಥ ಆಳ್ವ, ಟಿ.ಎ ಮೂಸಾ, ಎಂ. ಅಬ್ಬಾಸ್, ಎ.ಕೆ ಆರಿಫ್, ಲಕ್ಷ್ಮಣ ಪ್ರಭು, ಹರ್ಷಾದ್ ವರ್ಕಾಡಿ, ಅಜೀಸ್ ಕಲತ್ತೂರು, ಇರ್ಫಾನ ಇಕ್ಬಾಲ್, ಯು.ಕೆ ಸೈಫುಲ್ಲ ತಂಗಳ್, ಹಾದಿ ತಂಗಳ್, ಡಿ.ಎಂ.ಕೆ ಮಹಮ್ಮದ್, ಅಬ್ದುಲ್ಲ ಮಾದೇರಿ ಸೇರಿದಂತೆ ಅನೇಕ ನಾಯಕರು ವಿವಿಧ ಕೇಂದ್ರಗಳಲ್ಲಿ ಮಾತನಾಡಿದರು.
ಮಂಗಳವಾರ ಮಂಜೇಶ್ವರ ಹಾಗೂ ವರ್ಕಾಡಿ ಪಂಚಾಯತ್ ಪ್ರದೇಶಗಳಲ್ಲಿ ಮುಂದಿನ ಪರ್ಯಟನೆ ನಡೆಯಲಿದೆ.