ಪುತ್ತೂರು: ಕೊರಿಂಗಿಲದಲ್ಲಿರುವ ಮಿಸ್ಬಾಹುಲ್ ಹುದಾ ಮದ್ರಸದಲ್ಲಿ 2026ನೇ ಸಾಲಿನ ಮದ್ರಸ ಅಧ್ಯಯನ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪ್ರಥಮ ತರಗತಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳನ್ನು ಬಲೂನ್ ಹಾಗೂ ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ವಿಶೇಷವಾಗಿ, ಧಾರ್ಮಿಕ ಶಿಕ್ಷಣದಲ್ಲಿ ಸ್ವಫಾಹಿ ಬಿರುದು ಪಡೆದ ಕೀಲಂಪಾಡಿ ನಿಜಾರ್ ಸ್ವಫಾಹಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಖತೀಬರಾದ ಅಯ್ಯೂಬ್ ವಹಬಿ ಉಸ್ತಾದರು ಮದ್ರಸ ಶಿಕ್ಷಣದ ಅಗತ್ಯತೆ ಮತ್ತು ಮಹತ್ವವನ್ನು ವಿವರಿಸಿ, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಹ ಅಧ್ಯಾಪಕರಾದ ಅಬೂಬಕ್ಕರ್ ಮದನಿ ಉಸ್ತಾದರು ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಜಮಾತ್ ಕಮಿಟಿ ಪದಾಧಿಕಾರಿಗಳು, ಅಶ್ಬಾಲುಲ್ ಇಸ್ಲಾಮ್ ವೆಲ್ಫೇರ್ ಸಮಿತಿ, MISA ಸಮಿತಿಯ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.