ಮಾನವೀಯತೆಯ ಮೆರುಗು ತೋರಿದ ತಲಪಾಡಿ ಬಿಎಂಎಸ್ ಕೇರಳ ಲಾಟರಿ ಮಾರಾಟಗಾರರು, ಕ್ಯಾನ್ಸರ್ ಪೀಡಿತನಿಗೆ ಆರ್ಥಿಕ ನೆರವು ನೀಡಿ ಸಮಾಜ ಸೇವೆಗೆ ಮಾದರಿಯಾದರು.
ಕಾಸರಗೋಡು ತಾಲೂಕಿನ ತಲಪಾಡಿ ಗ್ರಾಮದ ಮಾಧವ ಅವರ ಪುತ್ರ ಪ್ರದೀಪ್ ಅವರು ಕೊರಳು ಭಾಗದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚವಾಗಿದ್ದು, ಮುಂದಿನ ಚಿಕಿತ್ಸೆಗೆ ಸಹಾಯ ಅಗತ್ಯವಿತ್ತು.
ಈ ಹಿನ್ನೆಲೆಯಲ್ಲಿ ತಲಪಾಡಿ ಬಿಎಂಎಸ್ ಲಾಟರಿ ಮಾರಾಟಗಾರರ ಸಂಘದ ಸದಸ್ಯರು ಒಟ್ಟುಗೂಡಿ ಸಂಗ್ರಹಿಸಿದ ನೆರವುಧನವನ್ನು ಶ್ರೀ ಭ್ರಾಮರಿ ಲಾಟರಿ ಮಾಲಕ ಪ್ರದೀಷ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಭಾಸ್ಕರ ಶೆಟ್ಟಿಗಾರ್ (ಶ್ರೀ ಲಕ್ಷ್ಮಿ ಲಾಟರಿ), ಸುಕೇಶ್ ಬೆಜ್ಜ (ಬೆಜ್ಜ ಲಾಟರಿ), ಆನಂದ್ (ಭಗವತಿ ಲಾಟರಿ), ಭಾಸ್ಕರ ಶೆಟ್ಟಿ (ಅಮ್ಮ ಲಾಟರಿ) ಸೇರಿದಂತೆ ಹಲವು ಸದಸ್ಯರು ಹಾಗೂ ಕೃಷ್ಣ ಉಪಸ್ಥಿತರಿದ್ದರು.
ಸಮಾಜದತ್ತ ಮಿಡಿಯುವ ಮನಸ್ಸು ಮತ್ತು ಸೇವಾ ಸಂಕಲ್ಪ ಇದ್ದರೆ, ಪ್ರತಿಯೊಬ್ಬರೂ ತಮ್ಮಿಂದಾದಷ್ಟು ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಉಳಿಸಬಹುದು ಎಂಬುದಕ್ಕೆ ಈ ಕಾರ್ಯ ಸ್ಪಷ್ಟ ಉದಾಹರಣೆಯಾಗಿದೆ.