ಹೊಸಂಗಡಿ :ಶಾಸಕನಾಗಿ ಖಾಸಗಿ ಕಟ್ಟಡದ ಮೂರನೇ ಅಂತಸ್ತೀನಲ್ಲಿ ಇರುವ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಮಾಡಲಾಗದ ಮಂಜೇಶ್ವರ ಶಾಸಕರ ಭರವಸೆ ಗಳು ಹಾಸ್ಯಸ್ಪದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಈ ಬಾರಿ ಗೆದ್ದರೆ ಮಹಿಳೆಯರಿಗೆ ಬಸ್ ಉಚಿತ ಎಂಬ ಶಾಸಕರ ಘೋಷಣೆ ವಂಚನೆಯ ಪರಮಾವಧಿ ಯಾಕೆಂದರೆ ಮಂಜೇಶ್ವರ ವಿ ಸಾ ವ್ಯಾಪ್ತಿಯಲ್ಲಿ ksrtc ಬಸ್ ಎಲ್ಲಿಯೂ ಲೋಕಲ್ ಸರ್ವಿಸ್ ನಡೆಸುವುದಿಲ್ಲ.
ಕಾಸರಗೋಡು ಮಂಗಳೂರು ಅಂತರ ರಾಜ್ಯ ksrtc ಗಳಲ್ಲಿ ಉಚಿತ ಪಾಸ್ ವ್ಯೆವಸ್ಥೆ ಕೊಡಲಾಗುವುದಿಲ್ಲ ಹಾಗಾದರೆ ಉಚಿತ ಬಸ್ ಎಂಬ ಮಂಜೇಶ್ವರ ಶಾಸಕರ ಪ್ರಣಾಳಿಕೆ ಘೋಷಣೆ ಜನರನ್ನು ಮೋಸ ಮಾಡುವ ಸಂಚಿನ ಭಾಗ ಎಂದು ಆದರ್ಶ ಬಿ ಎಂ ಮುಸ್ಲಿಂ ಲೀಗ್ ವಂಚನೆಯನ್ನು ಬಹಿರಂಗ ಗೊಳಿಸಿದರು.
ಬಿಜೆಪಿ ಈ ಬಾರಿ ಪ್ರಚಂಡ ಬಹುಮತ ದಿಂದ ಗೆಲ್ಲಲಿದೆ. ಆಯುಷ್ಮನ್ ಜಾರಿ ಮೊದಲ ಆದ್ಯತೆ ಆಗಲಿದೆ, ಕೇಂದ್ರ ಯೋಜನೆಗಳ ಸಮಗ್ರ ಜಾರಿಗೆ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ರನ್ನು ಗೆಲ್ಲಿಸುವಂತೆ ಕರೆ ನೀಡಿದರು. ವಾಹನ ಪ್ರಚಾರಣ ಜಾಥಾ ಉದ್ಘಾಟಿಸಿ ಮಾತನಾಡಿದರು. ಮುಖಂಡರಾದ ಹರೀಶ್ಚಂದ್ರ, ಯಾದವ ಬಡಾಜೆ, ನಿಶಾ ಭಟ್, ಗುರು ಕಿರಣ್, ನಂದ ಹೆಗ್ಡೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು