ಆನೆಕಲ್ಲು: ಎಸ್. ಎಸ್. ಕೆ ಕಾಸರಗೋಡು ಹಾಗೂ ಬಿ. ಆರ್. ಸಿ ಮಂಜೇಶ್ವರ ಆಶ್ರಯದಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರವು ಆನೆಕಲ್ಲು ಶಾಲೆಯಲ್ಲಿ ಜರಗಿತು.
ಶಿಬಿರದಲ್ಲಿ ಮೂರು ದಿನಗಳಳ್ಳಾಗಿ ಪೇಪರ್ ಕ್ರಾಪ್ಟ್, ಥಿಯೇಟರ್ ಗೇಮ್, ವಿವಿಧ ಆಟಗಳು,ಸಿನಿಮಾ,ಅಭಿನಯ ಮುಂತಾದ ವಿಚಾರಗಳಲ್ಲಿ ಸರೋಜ ಟೀಚರ್,ರಾಜೇಶ್ವರಿ ಟೀಚರ್, ರಶ್ಮಿ ಟೀಚರ್,ಮೊಯ್ದಿನ್ ಮಾಸ್ಟರ್,ಸದಾಶಿವ ಮಾಸ್ಟರ್, ಪ್ರಕಾಶ್ ಮಾಸ್ಟರ್,ರಾಜು ಮಾಸ್ಟರ್,ಚಂದ್ರಿಕಾ ಟೀಚರ್,ಶ್ಯಾಮಲ ಟೀಚರ್ ವಿವಿಧ ಚಟುವಟಿಕೆಗಳನ್ನು ಮಾಡಿದರು.
ಸಮಾರೋಪ ಸಮಾರಂಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಯರಾದ ರವಿಶಂಕರ್ , ಸಿತಾರ ಟೀಚರ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.ಚೈತ್ರ ಟೀಚರ್ ಬಗಂಬಿಲ ಸ್ವಾಗತಿಸಿ ಸಿ ಆರ್ ಸಿ ಕೊರ್ಡಿನೇಟರ್ ಶೈಲಜಾ ಟೀಚರ್ ವಂದಿಸಿದರು.ತಿಲಕ ಟೀಚರ್ ಕಾರ್ಯಕ್ರಮ ನಿರೂಪಿಸಿದರು.