ವರ್ಕಾಡಿ ಕಜೆ ಪದವು ಅಂಗನವಾಡಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕಜೆ ಪದವು ಎಂಬಲ್ಲಿ ಚಿಣ್ಣರ ಬೆಳವಣಿಗೆಗೆ ಆಧುನಿಕ ಸೌಕರ್ಯಗಳೊಂದಿಗೆ ಕೂಡಿದ ಸ್ಮಾರ್ಟ್ ಅಂಗನವಾಡಿ ಕಟ್ಟಡಕ್ಕೆ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕಟ್ಟಡಕ್ಕೆ ಮಂಜೇಶ್ವರ ಶಾಸಕರು ಶಂಕು ಸ್ಥಾಪನೆ ನಡೆಸಿದರು.
ವರ್ಕಾಡಿ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಎಸ್ ಅಧ್ಯಕ್ಷತೆ ವಹಿಸಿದರು.

ಗ್ರಾಮೀಣ ಪ್ರದೇಶವಾಗಿರುವ ಇಲ್ಲಿಯ ಚಿಣ್ಣರಿಗೆ ಶೈಕ್ಷಣಿಕ ಹಾಗೂ ಆಟದ ಸೌಲಭ್ಯಗಳನ್ನು ಒದಗಿಸುವ ಜೊತೆಯಾಗಿ ಸುರಕ್ಷಿತ ಹಾಗೂ ಆಧುನಿಕ ವಾತಾವರಣದಲ್ಲಿ ಚಿಣ್ಣರ ಬೆಳವಣಿಗೆಗೆ ಸಹಕಾರಿಯಾಗಲು ಹಾಗೂ ಸ್ಮಾರ್ಟ್ ತಂತ್ರಜ್ಞಾನ ಅಳವಡಿಕೆಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಇಲ್ಲಿಯ ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಯೊಂದು ಇದೀಗ ಸಾಕಾರ ಗೊಳ್ಳುತ್ತಿದೆ.
ಶಂಕುಸ್ಥಾಪನೆ ನಡೆಸಿ ಮಾತನಾಡಿದ ಶಾಸಕರು ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಈ ರೀತಿಯ ಸ್ಮಾರ್ಟ್ ಕಟ್ಟಡಗಳು ಅತ್ಯವಶ್ಯಕ. ಸರ್ಕಾರದ ಬದ್ಧತೆ ಪ್ರಕಾರ ಇವು ಸದೃಢ ಮೂಲಸೌಕರ್ಯಗಳನ್ನು
ಒದಗಿಸುತ್ತವೆ. ನಿರ್ದಿಷ್ಟ ಗುರಿಯನ್ನು ಸಾಧಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಬಳಿಕ ಎ ಎಲ್ ಎಂ ಎಸ್ಸಿ ಚೇಯರ್ಮ್ಯಾನ್ ಅಬ್ದುಲ್ ಮಜೀದ್ ಬಿ ಎ ರವರು ಮಾತನಾಡಿ ಮೊದಲಿದ್ದ ಅಂಗನವಾಡಿ ಕಟ್ಟಡ ಪೂರ್ಣವಾಗಿ ಹದೆಗೆಟ್ಟು ಫಿಟ್ ನೆಸ್ ಲಭಿಸದೆ ಇರುವಾಗ ನೂತನ ಕಟ್ಟಡಕ್ಕೆ ಫಂಡ್ ಲಭಿಸದೇ ಇರುವಾಗ ಶಾಸಕ ಎ ಕೆ ಎಂ ಅಶ್ರಫ್ ರವರ ಮುತುವರ್ಜಿಯಿಂದ ಇಂದು ಈ ಯೋಜನೆ ಸಾಕಾರಗೊಂಡಿದೆ ಎಂದು ಹೇಳಿದರು

ಕಜೆ ಪದವಿನಲ್ಲಿ ಶಂಕುಸ್ಥಾಪಣೆಗೊಂಡ ಈ ಯೋಜನೆ ಸ್ಥಳೀಯ ಅಭಿವೃದ್ಧಿಗೆ ಪ್ರೇರಕವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸ್ಮಾರ್ಟ್ ಸೇವೆಗಳನ್ನು ಗ್ರಾಮ ಮಟ್ಟದಲ್ಲೇ ಲಭ್ಯಗೊಳಿಸಲು ಪ್ರೇರಣೆಯಾಗಿದೆ. ಯೋಜನೆಯು ನಿರ್ಧಿಷ್ಟ ಅವಧಿಯಲ್ಲಿ ಪೂರ್ಣಗೊಳ್ಳುವ ಭರವಸೆ ಕೂಡಾ ಇದೆ.


ಈ ಸಂದರ್ಭ ಗ್ರಾ. ಪಂಚಾಯತು ಉಪಾಧ್ಯಕ್ಷ ಸಿದ್ದೀಖ್ ಪಾಡಿ, ಎ ಎಲ್ ಎಂ ಎಸ್ಸಿ ಚೇಯರ್ಮ್ಯಾನ್ ಅಬ್ದುಲ್ ಮಜೀದ್ ಬಿ ಎ, ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಸಾಮಾಣಿ, ಪಂ. ನಿಕಟಪೂರ್ವ ಅಧ್ಯಕ್ಷ ಪಿ ಬಿ ಅಬೂಬಕ್ಕರ್ ಪಾತೂರು, ಪಂ. ಕಾರ್ಯದರ್ಶಿ ಅಜಿತ್, ಐಸಿಡಿಎಸ್ ಸೂಪರ್ ವೈಸರ್ ಬಿಂದು, ಬಿ. ಆಹ್ಮದ್ ಕುಂಞ ಹಾಜಿ, ಇಬ್ರಾಹಿಂ ಮುಸ್ಲಿಯಾರ್, ಲತೀಫ್ ಕಜೆ, ರಾಜೇಶ್ವರಿ, ಶಶಿಕಲಾ ಹಾಗೂ ವೆಲ್ಫೇರ್ ಕಮಿಟಿ ಸದಸ್ಯರು, ಕುಟುಂಬ ಶ್ರೀ ಸದಸ್ಯರು ಊರ ಮಹನೀಯರು ಸೇರಿದಂತೆ ನೂರಾರು ಮಂದಿ ಸಮಾರಂಭದಲ್ಲಿ ಪಾಲ್ಗೊಂಡರು.
ಅಬ್ದುಲ್ ಮಜೀದ್ ಬಿ ಎ ಸ್ವಾಗತಿಸಿ ಮಂಜುಳಾ ಹೆಚ್ ಕೆ ವಂದಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!