ಸನಾತನ ಸಂದೇಶ ಯಾತ್ರೆಗೆ ಸ್ವಾಗತ ಸಮಿತಿ ರೂಪಿಕರಣ.

ಅಕ್ಟೋಬರ್ 7 ರಿಂದ 21 ರವರೆಗೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ನಡೆಯಲಿರುವ ಸನಾಧನ ಸಂದೇಶ ಯಾತ್ರೆಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯ ಸ್ವಾಗತ ಸಮಿತಿ ರಚನೆ ಸಭೆಯು ಮಾರ್ಗ ದರ್ಶಕ ಮಂಡಲ ಕೇರಳ ಘಟಕದ ನೇತೃತ್ವದಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಚಿನ್ಮಯ ಸಿಬಿಸಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಚಿನ್ಮಯ ಕೇರಳ ಘಟಕದ ಮುಖ್ಯಸ್ಥ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮಿ ವಹಿಸಿದ್ದರು ಮತ್ತು ಎಡನೀರು ಮಠಾದಿಶ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿ ಉದ್ಘಾಟಿಸಿದರು.

ಸನಾಧನ ಧರ್ಮ ಸಂದೇಶ ಯಾತ್ರೆಯ ರಾಜ್ಯ ಸ್ವಾಗತ ಗುಂಪಿನ ಪ್ರಧಾನ ಸಂಚಾಲಕ ಸ್ವಾಮಿ ಸತ್ಸ್ವರೂಪಾನಂದ ಸರಸ್ವತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು. ಇಂದು ಸಮಾಜ ಎದುರಿಸುತ್ತಿರುವ ಮೌಲ್ಯಗಳ ಕುಸಿತ, ಕುಟುಂಬ ವಿಭಜನೆ ಮತ್ತು ಮಾದಕ ವ್ಯಸನಕ್ಕೆ ಪರಿಹಾರವೆಂದರೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಮತ್ತು ಈ ಯಾತ್ರೆಯನ್ನು ಆ ಪ್ರಯತ್ನದ ಭಾಗವಾಗಿ ಕಲ್ಪಿಸಲಾಗಿದೆ ಎಂದು ಸ್ವಾಮಿ ಹೇಳಿದರು. ಅಮೃತಾನಂದಮಯಿ ಕಾಸರಗೋಡು ಮಠಾಧಿಥಪತಿ ಶ್ರೀ ವೇದವೇದ್ಯಮೃತ ಚೈತನ್ಯ ಸ್ವಾಮಿಗಳು ಪ್ರಾಸ್ತಾವಿಕ ಭಾಷಣ ಮಾಡಿದರು ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಸನ್ಯಾಸಿಗಳು ಶುಭ ಹಾರೈಸಿದರು. ಅಕ್ಟೋಬರ್ 7, 2025 ರಂದು ಕಾಸರಗೋಡಿನಿಂದ ಪ್ರಾರಂಭವಾಗುವ ಈ ಯಾತ್ರೆಯ ಸ್ವಾಗತ ಗುಂಪಿನ ಅಧ್ಯಕ್ಷರಾಗಿ ಮಧುಸೂದನ ಅಯ್ಯರ್ ಅವರನ್ನು ನೇಮಿಸಲಾಗಿದೆ. ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ 501 ಸದಸ್ಯರ ಸಮಿತಿಯನ್ನು ಘೋಷಿಸಲಾಗಿದೆ.

ವಿನು ಸ್ವಾಮಿಕಲ್ ಸ್ವಾಗತಿಸಿ,ವೇದವೇದೀಯಾಮೃತ ಚೈತನ್ಯ ರವರು ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಅಧ್ಯಕ್ಷತೆ ವಹಿಸಿದರು. ಸ್ವಾಮಿ ಸತ್ಸ್ವರೂಪಾನಂದ ಸರಸ್ವತಿ ಶ್ರೀಗಳು ಮುಖ್ಯ ಭಾಷಣ ಮಾಡಿದರು. ಸ್ವಾಮಿ ಪ್ರೇಮಾನಂದ ಶ್ರೀಗಳು ಅನುಗ್ರಹ ಭಾಷಣ ಮಾಡಿದರು. ಬ್ರಹ್ಮಚಾರಿಣಿ ದಿಶಾ ಚೈತನ್ಯರವರು ಕಾರ್ಯಕ್ರಮ ನಿರೂಪಣೆ ಗೈದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!