​ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ: ಆರೋಪಿ ಬಂಧನ

ಕಾಸರಗೋಡು: ಶಾಲೆಯಿಂದ ಮನೆಗೆ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದ 15 ವರ್ಷದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ.

ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರವಾಸಿ ಇಲ್ಯಾಸ್ ಇಸ್ಮಾಯಿಲ್ (34) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

​ಮಂಗಳವಾರ ಸಂಜೆ 4:30ರ ಸುಮಾರಿಗೆ ಬಾಲಕಿ ಮನೆಗೆ ತೆರಳಲು ಕಾಯುತ್ತಿದ್ದಾಗ, ಆರೋಪಿಯು ಆಕೆಯ ಫೋಟೋ ತೆಗೆಯಲು ಯತ್ನಿಸಿ, ನಂತರ ಬಲವಂತವಾಗಿ ಅತಿಕ್ರಮಣ ನಡೆಸಿದ್ದಾನೆ. ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದರೂ ಆರೋಪಿ ಕಿರುಕುಳ ಮುಂದುವರಿಸಿದಾಗ ಧೈರ್ಯದಿಂದ ವರ್ತಿಸಿದ ಬಾಲಕಿ, ಆರೋಪಿಯ ಹೊಟ್ಟೆಗೆ ಒದ್ದು ಸ್ಥಳದಿಂದ ಓಡಿಹೋಗಿ ಸಮೀಪದ ಮನೆಯಲ್ಲಿ ಆಶ್ರಯ ಪಡೆದಳು.

ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಚಂದೇರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!