ಕಾಸರಗೋಡು : ಆಗಸ್ಟ್ ತಿಂಗಳ 7ಮತ್ತು 8 ಶುಕ್ರವಾರ,ಶನಿವಾರ ಗಳoದು ಮೂಡಬಿದಿರೆಯ ಆಳ್ವಾಸ್ ಕಾಲೇಜು ಪರಿಸರದಲ್ಲಿ ನಡೆಯಲಿರುವ ಬ್ರಹತ್ ಉದ್ಯೋಗ ಮೇಳ ವಾದ ಆಳ್ವಾಸ್ ಪ್ರಗತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವ ಕಾಸರಗೋಡು ಜಿಲ್ಲೆಯ ಉದ್ಯೋಗಾರ್ಥಿ ಯುವಕ, ಯುವತಿಯರಿಗೆ ತಮ್ಮ ಹೆಸರು ನೋಂದಾಯಿಸುವ ಕುರಿತು ಸೂಕ್ತ ಮಾಹಿತಿಗಳನ್ನು ನೀಡಲಾಗುವುದು

ಆಗಸ್ಟು ಒಂದನೇ ತಾರೀಕು ಶನಿವಾರದಂದು ಉಪ್ಪಳ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಅಪರಾಹ್ನ 3 ಗಂಟೆಯಿಂದ 5 ಗಂಟೆ ತನಕ ಈ ಬಗ್ಗೆ ಒಂದು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಕಾರ್ಯಾಗಾರದಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕರಾದ ವಿವೇಕ್ ಆಳ್ವ ಭಾಗವಹಿಸುವರು ಆಗಸ್ಟ್ 7,8 ರಂದು ಜರಗಲಿರುವ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದ ಕುರಿತು ಉಪಯುಕ್ತ ಮಾಹಿತಿ ಪಡೆಯಲಿಚ್ಚಿಸುವ ಉದ್ಯೋಗಾರ್ಥಿಗಳುy ಆಗಸ್ಟ್ ಒಂದನೇ ತಾರೀಕಿನಂದು ಅಪರಾಹ್ನ 3 ಗಂಟೆಗೆ ಸರಿಯಾಗಿ ಉಪ್ಪಳದಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಹಾಜರಿರಬೇಕೆಂದು ಕೋರಲಾಗಿದೆ. ಇದರಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಉದ್ಯೋಗರ್ಥಿಗಳು ಭಾಗವಹಿಸಬಹುದಾಗಿದೆ

ಆಳ್ವಾಸ್ ಬ್ರಹತ್ ಪ್ರಗತಿ ಮೇಳದಲ್ಲಿ 300 ಕ್ಕೂ ಮಿಕ್ಕಿದ ಕಂಪನಿಗಳು ಭಾಗವಹಿಸಳಿದ್ದು ಎಸ್ ಎಸ್ ಎಲ್ ಸಿ ಯಿಂದ ತೊಡಗಿ ಪಿ ಯು ಸಿ, ಪದವಿ, ಸ್ನಾತಕೋತ್ತರ ಪದವಿ, ಮತ್ತು ವೃತ್ತಿಪರ ಶಿಕ್ಷಣ ಪಡೆದವರು ತಾಂತ್ರಿಕ ಶಿಕ್ಷಣ ಹೊಂದಿದವರಿಗೆ ಉತ್ತಮ ಅವಕಾಶಗಳಿವೆ.ಕಾಸರಗೋಡು ಜಿಲ್ಲೆಯ ಉದ್ಯೋಗರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ನ್ಯಾಯವಾದಿ ಬಿ ಸುಬ್ಬಯ ರೈ ಅವರು ವಿನಂತಿಸಿದ್ದಾರೆ


