ಮಂಜೇಶ್ವರ: ಒಂದಂಕ್ಕಿಂತ ಹೆಚ್ಚು ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಆರೋಪಿಗಳಾಗುವವರನ್ನು ಬಂಧಿಸಿ ದೀರ್ಘ ಕಾಲ ಜೈಲಿಗಟ್ಟಲು ಕೇರಳ ಪೊಲೀಸ್ ಇಲಾಖೆ ಜ್ಯಾರಿಗೊಳಿಸಿರುವ ಪಿಟ್ ಎನ್ಡಿಪಿಎಸ್ ಆಕ್ಟ್ ಪ್ರಕಾರ ಮಂಜೇಶ್ವರ ನಿವಾಸಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆಕ್ಟ್ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಬಂಧಿಸಲ್ಪಡುವ ಮೊದಲ ವ್ಯಕ್ತಿಯಾಗಿದ್ದಾನೆ ಈತ.
ಮಂಜೇಶ್ವರ ಬಡಾಜೆ ನಿವಾಸಿ ಸೂರಜ್ ರೈ(27) ಬಂಧಿತ ಆರೋಪಿ. ಮಂಜೇಶ್ವರ ಪೊಲೀಸರು ಈತನನ್ನು ಬಂಧಿಸಿದ್ದಾರೆ. ರಾಜ್ಯ ಸರಕಾರದ ಆದೇಶದಂತೆ ಈತನನ್ನು ಒಂದು ವರ್ಷದ ತನಕ ಜೈಲಿನಲ್ಲಿ ಕೂಡಿಹಾಕಲೆಂದು, ನಂತರ ಪೂಜಾಪುರ ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ ರೆಡ್ಡಿಯ ನಿರ್ದೇಶದಂತೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ 2 ಹಾಗೂ ಉಳ್ಳಾಲದಲ್ಲಿ ಈತನ ವಿರುದ್ಧ ಬೇರೊಂದು ಮಾದಕದ್ರವ್ಯ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರಂತರವಾಗಿ ಮಾದಕದ್ರವ್ಯ ಪ್ರಕರ ಣಗಳಲ್ಲಿ ಆರೋಪಿಗಳಾಗಿರುವವರನ್ನು ಗುರುತಿಸಿ ಪ್ರಿವೆನ್ಯನ್ ಆಫ್ ಇಲ್ಲಿಸಿಟ್ ಟ್ರಾಫಿಕ್ ಎನ್ಡಿಪಿಎಸ್ (ಪಿಟ್ ಎನ್ಡಿಪಿಎಸ್) ಆಕ್ಟ್ ಪ್ರಕಾರ ಬಂಧಿಸಿ ಜೈಲಿಗಟ್ಟಲಾಗುತ್ತಿದೆ. ಅದರಂತೆ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ಇನ್ನು ಮುಂದುವರಿಯಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.