ಉಪ್ಪಳದ ಖ್ಯಾತ ಉದ್ಯಮಿ, ಧಾರ್ಮಿಕ ಮುಂದಾಳು ಕಯ್ಯಾರು ನಿವಾಸಿ ಹರಿಶ್ಚಂದ್ರ ಹೊಳ್ಳ ನಿಧನ

ಉಪ್ಪಳ: ಕಯ್ಯಾರು ನಿವಾಸಿ ಉಪ್ಪಳದಲ್ಲಿ ಖ್ಯಾತ ಉದ್ಯಮಿ, ಧಾರ್ಮಿಕ ಮುಂದಾಳು  ಹರಿಶ್ಚಂದ್ರ ಹೊಳ್ಳ[83]  ನಿಧನರಾದರು ಶುಕ್ರವಾರ ಮಧ್ಯಾಹ್ನ ಇವರಿಗೆ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಉಪ್ಪಳದ ಖಾಸಾಗಿ ಆಸ್ಪತ್ರೆಯಲ್ಲಿ  ನಿಧನ ಹೊಂದಿದರು.  ಇವರು  ಉಪ್ಪಳದಲ್ಲಿ ದೀರ್ಘಕಾಲದಿಂದ ಪೂರ್ಣಿಮಾ  ಇಂಡಸ್ತ್ರೀ ಸ್ ಇದರ ಮಾಲಕರಾಗಿದ್ದರು. ಉಪ್ಪಳ  ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದರು.

ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸoಸ್ಥೆಗೆ ಬೆನ್ನೆಲುಬಾಗಿದ್ದರು.  ಅಲ್ಲದೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಮತ್ತು ಸಂಘ ಸಂಸ್ಥೆಗಳಿಗೆ ಉದಾರವಾಗಿ ಧನ ಸಹಾಯವನ್ನು ನೀಡುತಿದ್ದರು. ಮೃತರು ಪತ್ನಿ ಲಲಿತ, ಮಕ್ಕಳಾದ ಪೂರ್ಣಿಮಾ, ಪದ್ಮಿನಿ, ಪ್ರೀತಿ, ಸಂತೋಷ್ ಹೊಳ್ಳ, ಅಳಿಯಂದಿರಾದ  ಅರುಣ್ ಕುಮಾರ್, ಶಶಿಕಾಂತ್, ಹೇಮಂತ್, ಸೊಸೆ ಲಕ್ಷ್ಮೀ ಸಹೋದರರಾದ ಡಾ.ಕೆ.ಪಿ ಹೊಳ್ಳ, ರಾಧಾಕೃಷ್ಣ ಹೊಳ್ಳ,  ವಿಷ್ಣು ಹೊಳ್ಳ, ಶ್ರೀಧರ ಹೊಳ್ಳ, ಸೂರ್ಯನಾರಾಯಣ ಹೊಳ್ಳ, ಸಹೋದರಿ ಶ್ಯಾಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!