ಹೊಸಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಮಂತ್ರಣ ಪತ್ರಿಕೆ ಬಿಡುಗಡೆ .

ಮಂಜೇಶ್ವರದ ಹೊಸಂಗಡಿಯ 45 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಇತ್ತೀಚೆಗೆ ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು.ಮಂಜೇಶ್ವರ ಸರ್ವಿಸ್ ಕೊ_ಓಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ನಿರ್ದೇಶಕರಾದ ಸಿ.ಎಚ್. ಗಣೇಶ್ ಬಿಡುಗಡೆಗೊಳಿಸಿದರು.

ಪದ್ಮನಾಭ ಕಡಪ್ಪರ ,ಹರೀಶ್ ಮಾಡ , ನ್ಯಾಯವಾದಿ ನವೀನ್ ರಾಜ್,ದಿನಕರ ಹೊಸಂಗಡಿ,ಆದರ್ಶ್ ಬಿ ಎಂ , ಅವಿನಾಶ್ ಮಂಜೇಶ್ವರ ,ಭಾಸ್ಕರ ಮಂಜೇಶ್ವರ ,ರತನ್ ಹೊಸಂಗಡಿ ,ಚಿನ್ಮಯಾನಂದ ಹೊಸಂಗಡಿ ಮುಂತಾದವರು ಉಪಸ್ಥಿತರಿದ್ದರು.

ಆಗಸ್ಟ್ 27 ರಿಂದ 30 ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!