ಕಾಸರಗೋಡು: ವಿಮಾನಗಳಲ್ಲಿ ಬಂದು, ರೈಲಿನಲ್ಲಿ ತರಿಸಿಕೊಂಡ ಬೈಕ್‌ಗಳಲ್ಲಿ ರಾಜ್ಯಾದ್ಯಂತ ಸುತ್ತಾಡಿ ದರೋಡೆ ನಡೆಸುತ್ತಿದ್ದ ಉತ್ತರ ಪ್ರದೇಶದ ಆರು ಮಂದಿ ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ತೃಶೂರಿನಲ್ಲಿ ಕಳವು ಯತ್ನದ ವೇಳೆ ಸಿಕ್ಕಿಬಿದ್ದ ತಂಡದ ಸೂತ್ರಧಾರ ರಿಹಾನ್ (20) ನೀಡಿದ ಸುಳಿವು ಆಧರಿಸಿ ಕಳಮಶ್ಶೇರಿಯ ವಸತಿಗೃಹದ ಮೇಲೆ ದಾಳಿ ನಡೆಸಿದ ಪೊಲೀಸರು ಸೈಫುಲ್ಲಾ, ಹರ್ಮಾನ್ ಹನ್ಸಾರಿ, ಸುಹೈಲ್, ಶಕೀಬ್ ಹಾಗೂ ರಿಹಾನ್‌ಖಾನ್ ಎಂಬವರನ್ನು ಬಂಧಿಸಿದ್ದಾರೆ. ಇವರಿಂದ ಕೇಬಲ್ ಕಟರ್, ನಗದು, ವಾಚ್ ಹಾಗೂ ವಿಮಾನ/ರೈಲು ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಂಕೆ ಬಾರದಂತೆ ಕಟ್ಟಡ ಕಾರ್ಮಿಕರ ವೇಷ ಧರಿಸುತ್ತಿದ್ದ ಈ ಗ್ಯಾಂಗ್‌ನ ನಾಲ್ವರು ಕಣ್ಣೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ದರೋಡೆಗಾಗಿಯೇ ಮುಂಗಡವಾಗಿ ಬೈಕ್‌ಗಳನ್ನು ರೈಲಿನಲ್ಲಿ ತರಿಸಿಕೊಳ್ಳುತ್ತಿದ್ದ ಈ ಅಂತರರಾಜ್ಯ ಖತರ್ನಾಕ್ ಕಳ್ಳರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

