ಕುಂಬಳೆ: ಶಿರಿಯಾದಲ್ಲಿ ನಿಯಂತ್ರಣ ತಪ್ಪಿದ ಸ್ಕೂಟರ್ ರಾಷ್ಟ್ರೀಯ ಹೆದ್ದಾರಿಯ ಸಂರಕ್ಷಣಾ ಗೋಡೆಗೆ ಢಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ಮಂಗಳೂರಿನ ಪೆರ್ಮುದೆ ಕಟೀಲು ನಿವಾಸಿ ಜೋಸೆಫ್ ಡಿಸೋಜ (52) ಗಂಭೀರ ಗಾಯಗೊಂಡವರಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೇಳದಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿ ಸ್ವಊರಿಗೆ ಮರಳುತ್ತಿದ್ದಾಗ ಬಾನುವಾರ ರಾತ್ರಿ ಈ ದುರಂತ ಸಂಭವಿಸಿದೆ. ಶಿರಿಯಾ ತಲುಪುತ್ತಿದ್ದಂತೆ ವಾಹನದ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯಾಗಿದೆ.


