ಕಾಸರಗೋಡು : ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ ಇವರ “ಕನ್ನಡ ಸಂಘ (ನೋ.)ಬೆಂಗಳೂರು ಪ್ರಯೋಜಕತ್ವದಲ್ಲಿ, ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 227/2008)ಕನ್ನಡ ಭವನ ಪ್ರಕಾಶನ ಸಹಯೋಗದಲ್ಲಿ ನವೆಂಬರ್ 1(ಒಂದು )2026.ಭಾನುವಾರ ಬೆಳಿಗ್ಗೆ 10.ಗಂಟೆಗೆ ಗಡಿನಾಡು ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯಸಭಾ ಭವನದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಸಂಭ್ರಮ -2026..” ಉದ್ಘಾಟನೆ ಗೊಂಡು ವಿವಿಧ ಕಾರ್ಯಕ್ರಮ ಗಳ ಮೂಲಕ ಕೇರಳ -ಕರ್ನಾಟಕ ರಾಜ್ಯಗಳ ಹಲವಾರು ಪ್ರತಿಭೆಗಳು ಪರಸ್ಪರ ಬೆಸೆದು ಕೊಳ್ಳಲಿದ್ದಾರೆ.

ಈಗಾಗಲೇ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಅಸಿಸ್ಟೆಂಟ್ ಕಮೀಷನರ್ ಶ್ರೀ ಮಂಜುನಾಥ್ ಸರ್, ಕನ್ನಡ ಸಂಘ ಪದಾಧಿಕಾರಿಗಳಾದ ಶ್ರೀ ದಶರತಿ ಸರ್, ಕೃಷ್ಣ ಮೂರ್ತಿ ಸರ್ ಕನ್ನಡ ಭವನಕ್ಕೆ ಭೇಟಿ ನೀಡಿ ಪರಸ್ಪರ ಕಾರ್ಯಕ್ರಮ ಸಮಾಲೋಚನಾ ಸಭೆ ನಡೆಸಿದ್ದಾರೆ. ಕಾರ್ಯಕ್ರಮ ರೂಪು ರೇಖೆ ಬಗ್ಗೆ ತೀರ್ಮಾನವಾಗಿದೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ




