ಕೊರಿಯರ್ ಮೂಲಕ ಕೋಟ್ಯಂತರ ಮೌಲ್ಯದ ಎಂಡಿಎಂಎ ಸರಬರಾಜು: ಮೂವರ ಬಂಧನ

ಕಾಸರಗೋಡು :ಪಂಜಾಬ್‌ನಿಂದ ಕೊರಿಯರ್ ಮೂಲಕ ತರಿಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 2 ಕೆಜಿ ಎಂಡಿಎಂಎ ಮಾದಕ ವಸ್ತುವಿನೊಂದಿಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕುಂಬಳೆ ಬಂದ್ಯೋಡಿನ ಅಫೀಲ್ ಹಾಗೂ ಮಂಗಳೂರು ಮೂಲದ ಜಿಯಾವುಲ್ಲಾ ಮತ್ತು ಅಲ್ತಾಫ್ ಬಂಧಿತ ಆರೋಪಿಗಳು.

​ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಡಿಯಲ್ಲಿರುವ ನಾರ್ಕೋಟಿಕ್ ಸೆಲ್ ‘ಡಾನ್ಸಾಫ್’ ತಂಡಕ್ಕೆ ಸಿಕ್ಕ ರಹಸ್ಯ ಮಾಹಿತಿಯ ಆಧಾರದ ಮೇಲೆ ಮಂಗಳೂರು ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.ಇತ್ತೀಚೆಗೆ ಎಂಡಿಎಂಎ ಜೊತೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬನಿಂದ ದೊರೆತ ಮಾಹಿತಿಯೇ ಈ ಬೃಹತ್ ಡ್ರಗ್ಸ್ ಜಾಲದ ಭೇದನೆಗೆ ಕಾರಣವಾಯಿತು.ಪಂಜಾಬ್‌ನಿಂದ ಮಂಗಳೂರಿಗೆ ಕೊರಿಯರ್ ಮೂಲಕ ಬೃಹತ್ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ರವಾನಿಸಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು.

ಮಾದಕ ವಸ್ತುಗಳು ಮಂಗಳೂರಿನ ಕೊರಿಯರ್ ಸಂಸ್ಥೆಗೆ ತಲುಪಿರುವುದನ್ನು ಖಚಿತಪಡಿಸಿಕೊಂಡ ನಂತರ, ಈ ಮಾಹಿತಿಯನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಯಿತು.ಕೊರಿಯರ್ ಸಂಸ್ಥೆಯಿಂದ ಮಾದಕ ವಸ್ತುವನ್ನು ಸ್ವೀಕರಿಸಿದ ನಂತರ ಅದನ್ನು ಕಾಸರಗೋಡಿಗೆ ಸಾಗಿಸಲು ಆರೋಪಿಗಳು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕಾರು ಮತ್ತು ಆಟೋದಲ್ಲಿ ಇದನ್ನು ಸಾಗಿಸುತ್ತಿದ್ದಾಗ ಮೂವರೂ ಆರೋಪಿಗಳನ್ನು ಮಾದಕ ವಸ್ತುವಿನೊಂದಿಗೆ ಬಂಧಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!