ಉಪ್ಪಳ ಸರ್ವಿಸ್ ರಸ್ತೆಯಲ್ಲಿ ಕಸದ ರಾಶಿ; ಸಾರ್ವಜನಿಕರಿಗೆ ಸಂಕಷ್ಟ

ಉಪ್ಪಳ: ಉಪ್ಪಳ ಗೇಟ್ ಕಾಸರಗೋಡಿನಿಂದ ಮಂಗಳೂರಿಗೆ ತೆರಳುವ ಸರ್ವಿಸ್ ರಸ್ತೆಯಲ್ಲಿ ಕಸ ಸುರಿಯುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ಪ್ಲಾಸ್ಟಿಕ್ ಚೀಲಗಳು ಮತ್ತು ಕಸದ ಮೂಟೆಗಳು ರಾಶಿಯಾಗಿ ಬಿದ್ದಿರುವುದರಿಂದ ಗಂಭೀರ ಆರೋಗ್ಯ ಹಾಗೂ ಪರಿಸರ ಸಮಸ್ಯೆಗಳು ಉಂಟಾಗುವ ಆತಂಕ ಎದುರಾಗಿದೆ.

ಮಳೆ ಬಂದಾಗ ಕಸ ರಸ್ತೆಗೆ ಹರಿದು ಬರುವುದರ ಜೊತೆಗೆ ದುರ್ವಾಸನೆಯೂ ಹೆಚ್ಚಾಗುತ್ತಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಬದಿಯಲ್ಲಿ ಕಸ ಸುರಿಯಲಾಗುತ್ತಿರುವುದರಿಂದ ಪಾದಚಾರಿಗಳಿಗೆ ನಡೆದಾಡುವುದೂ ಕಷ್ಟಕರವಾಗಿದೆ.

ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಪ್ರದೇಶದಲ್ಲಿ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕಸ ಸುರಿಯುವುದನ್ನು ತಡೆಗಟ್ಟಲು ಅಧಿಕಾರಿಗಳು ನಿರಂತರ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

SHARE
Loading spinner

One thought on “ಉಪ್ಪಳ ಸರ್ವಿಸ್ ರಸ್ತೆಯಲ್ಲಿ ಕಸದ ರಾಶಿ; ಸಾರ್ವಜನಿಕರಿಗೆ ಸಂಕಷ್ಟ”

Leave a Reply

Your email address will not be published. Required fields are marked *

error: Content is protected !!