
ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಸರಗೋಡು ದಸರಾ ಸಂಕೀರ್ತನ ದಶಾಹ ಕಾರ್ಯಕ್ರಮದ ಎರಡನೇ ದಿನದಂದು, ಮಂಗಳೂರಿನ ಜೆಪ್ಪುವಿನ ರಾಮಕ್ಷತ್ರಿಯ ಸಂಕೀರ್ತನ ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಅಕ್ಟೋಬರ್ 12ರಂದು ನಡೆದ ಈ ಕಾರ್ಯಕ್ರಮದಲ್ಲಿ ಭಜನಾ ಸೇವೆ ಸಲ್ಲಿಸಿದ ರಾಮಕ್ಷತ್ರಿಯ ಸಂಕೀರ್ತನ ತಂಡಕ್ಕೆ ‘ಕಾಸರಗೋಡು ದಸರಾ ಸಾಧಕ ಸನ್ಮಾನ’ ನೀಡಿ ಗೌರವಿಸಲಾಯಿತು.ಕಾಸರಗೋಡು ದಸರಾ ಪ್ರಧಾನ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾ ರಾಣಿ ಟೀಚರ್ ಅವರು ತಂಡದ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು


I was struggling to find the official link but zuma78login made it so easy. Everything works perfectly on my mobile browser.