ಅಬ್ದುಲ್ ಶುಕೂರ್ ಕೊಲೆ ಪ್ರಕರಣ: ಈ ತಿಂಗಳ ಅಂತ್ಯದಲ್ಲಿ ಅಂತಿಮ ತೀರ್ಪು

​ ಕಾಸರಗೋಡು: ಎಂ.ಎಸ್.ಎಫ್ ನಾಯಕ ಅರಿಯಿಲ್ ಅಬ್ದುಲ್ ಶುಕೂರ್ ಕೊಲೆ ಪ್ರಕರಣದ ವಿಚಾರಣೆ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

ಎರ್ನಾಕುಲಂ ಸಿ.ಬಿ.ಐ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶ ಶಬರಿನಾಥ್ ಅವರ ಸಮ್ಮುಖದಲ್ಲಿ 2025 ಫೆಬ್ರವರಿ 5 ರಂದು ವಿಚಾರಣೆ ಆರಂಭವಾಗಿತ್ತು. ಈ ತಿಂಗಳ 23 ರಂದು ನ್ಯಾಯಾಲಯವು ತೀರ್ಪು ನೀಡುವ ದಿನಾಂಕವನ್ನು ನಿಗದಿಪಡಿಸಲಿದೆ.

​2012 ಫೆಬ್ರವರಿ 20 ರಂದು ಸಿ.ಪಿ.ಎಂ ನಾಯಕರಾದ ಪಿ. ಜಯರಾಜನ್ ಮತ್ತು ಟಿ.ವಿ. ರಾಜೇಶ್ ಅವರ ವಾಹನದ ಮೇಲೆ ಮುಸ್ಲಿಂ ಲೀಗ್ ಕಾರ್ಯಕರ್ತರು ದಾಳಿ ನಡೆಸಿದ್ದರೆನ್ನಲಾದ ಘಟನೆಯ ನಂತರ, ಶುಕೂರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಈ ಕೊಲೆಯ ಹಿಂದೆ ಸಂಚು ರೂಪಿಸಲಾಗಿದೆ ಎಂದು ಸಿ.ಪಿ.ಎಂ ನಾಯಕರು ಸೇರಿದಂತೆ ಹಲವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.

ಪ್ರಕರಣದ ಸ್ಥಳೀಯ ಪೊಲೀಸರ ತನಿಖೆಯ ಬಗ್ಗೆ ಶುಕೂರ್ ಅವರ ತಾಯಿ ಅಸಮಾಧಾನ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದ ನಂತರ, ಪ್ರಕರಣದ ತನಿಖೆಯನ್ನು ಸಿ.ಬಿ.ಐಗೆ ವಹಿಸಲಾಗಿತ್ತು.

ಸಿ.ಬಿ.ಐ ಸುದೀರ್ಘ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!