ಪ್ರಾಣದಾನಿ ಪತಿಗೆ ದ್ರೋಹ ಬಗೆದು ಪರಾರಿಯಾಗಿದ್ದ ಸರ್ಕಾರಿ ಅಧ್ಯಾಪಿಕೆ ವಾಪಸ್: ಕರುಳುಬಳ್ಳಿಯ ತ್ಯಾಗ ಮರೆತವಳಿಗೆ ಎಚ್ಚರಿಕೆ

ಕಾಸರಗೋಡು /​ಕಲ್ಲಿಕೋಟೆ: ತನಗೆ ಗಂಭೀರ ಕಾಯಿಲೆ ಬಂದಾಗ ತನ್ನದೇ ಕರುಳಿನ ಬಾಗವನ್ನು ನೀಡಿ ಮರುಜನ್ಮ ನೀಡಿದ ಪತಿಗೆ ದ್ರೋಹ ಬಗೆದು ಪ್ರೇಮಿಯೊಂದಿಗೆ ಪರಾರಿಯಾಗಿದ್ದ ಸರ್ಕಾರಿ ಶಾಲಾ ಅಧ್ಯಾಪಿಕೆ ಕೊನೆಗೂ ಪತಿ ಮತ್ತು ಮಕ್ಕಳ ಬಳಿಗೇ ವಾಪಸಾಗಿದ್ದಾಳೆ.

​ಹತ್ತು ದಿನಗಳ ಹಿಂದೆ ಶಾಲೆಗೆಂದು ತೆರಳಿ ವಡಗರ ತೋಡನ್ನೂರ್ ನಿವಾಸಿ ಸಮದ್ ಎಂಬಾತನ ಜೊತೆ ನಾಪತ್ತೆಯಾಗಿದ್ದ ಮೊಲ್ಲೋತ್ತರ ಸರ್ಕಾರಿ ಎಲ್‌ಪಿ ಶಾಲೆಯ ಅಧ್ಯಾಪಿಕೆ ಕೆ. ಅನುಮೋಳ್‌ಳನ್ನು ಪೊಲೀಸರು ಪಾಲಕ್ಕಾಡ್‌ನ ಪುದುಕ್ಕೇರಿಯ ಬಾಡಿಗೆ ಮನೆಯಿಂದ ಪತ್ತೆಹಚ್ಚಿದ್ದರು.

ಈಕೆಯ ಪತಿ ಸುಭಾಷ್ ಹಿಂದೆ ತಮ್ಮದೇ ಪ್ರಾಣವನ್ನು ಪಣಕ್ಕಿಟ್ಟು, ಅನುಮೋಳ್‌ಗೆ ಕರುಳಿನ ದಾನ ಮಾಡುವ ಮೂಲಕ ಹೊಸ ಜೀವನ ಕರುಣಿಸಿದ್ದರು.

ಇಂತಹ ಮಹಾತ್ಯಾಗವನ್ನು ಮರೆತು ಅಧ್ಯಾಪಿಕೆ ಪರಾರಿಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

​ಕಲ್ಲಿಕೋಟೆಗೆ ಕರೆತರಲಾದ ಇವರಿಬ್ಬರನ್ನು ಕೊಯಿಲಾಂಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಯಿತು. ಬಳಿಕ ಅಧ್ಯಾಪಿಕೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಮಕ್ಕಳನ್ನು ಉಪೇಕ್ಷಿಸಿದ ಆರೋಪದ ಮೇಲೆ ಜುವಿನೈಲ್ ಜಸ್ಟೀಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾದರೆ ಜೈಲುಪಾಲಾಗುವ ಭೀತಿ ಹಾಗೂ ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾದ ಹಿನ್ನೆಲೆಯಲ್ಲಿ, ಅಧ್ಯಾಪಿಕೆ ತನ್ನ ನಿಲುವು ಬದಲಿಸಿ ಕುಟುಂಬದೊಂದಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿದಳು.

ಪರಿಣಾಮವಾಗಿ ಕೋರ್ಟ್ ಒಪ್ಪಿಗೆಯಂತೆ ಆಕೆಯನ್ನು ಪತಿ, ಮಕ್ಕಳು ಹಾಗೂ ಹೆತ್ತವರೊಂದಿಗೆ ಕಳುಹಿಸಿಕೊಡಲಾಯಿತು.

ಜೊತೆಗೆ ಪರಾರಿಯಾಗಿದ್ದ ಸಮದ್‌ಗೂ ನ್ಯಾಯಾಲಯ ಕುಟುಂಬದೊಂದಿಗೆ ತೆರಳಲು ಅನುಮತಿ ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!