50 ಕುಟುಂಬಗಳಿಗೆ ಶ್ರೀ ಸದಾಶಿವ ಶೆಟ್ಟಿಯವರಿಂದ ಸಹಾಯ ಹಸ್ತ ವಿತರಣೆ

ಬಡವರ ಬಂಧು, ಕೊಡುಗೈ ದಾನಿ, ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರ ಹೆಸರಿನಲ್ಲಿ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಎರಡು ವರ್ಷದ ಹಿಂದೆ ಸ್ಥಾಪನೆಯಾಗಿ ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುತ್ತದೆ. ಅದೇ ರೀತಿ ಸೇವಾ ಬಳಗ ಕಚೇರಿಗೆ ಬಂದಂತಹ ಅಶಕ್ತರ ಅರ್ಜಿಗಳನ್ನು ಪರಿಶೀಲಿಸಿ, ಕೆಲವು ಮಾನದಂಡಗಳನ್ನು ಅನುಸರಿಸಿ ಮೊದಲು ಬಂದ 50 ಕುಟುಂಬಗಳಿಗೆ ಶ್ರೀ ಸದಾಶಿವ ಅಣ್ಣನವರು ನೀಡುವ ಸಹಾಯ ಹಸ್ತವನ್ನು ದಿನಾಂಕ 29-04-2025 ರಂದು ಮಂಗಳವಾರ ಚಿಗುರುಪಾದೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಸದಾಶಿವ ಶೆಟ್ಟಿ ಸೇವಾ ಬಳಗ ದ ಗೌರವ ಸಲಹೆಗಾರರಾದ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಉಪಾಧ್ಯಕ್ಷರಾದ ಶ್ರೀ ಕೆ ನಾರಾಯಣ ನಾಯ್ಕ್ ನಡುಹಿತ್ಲು,ಕೋಶಾಧಿಕಾರಿ ಶ್ರೀ ಕಾರ್ತಿಕ್ ಶೆಟ್ಟಿ ಮಾಜಿಬೈಲ್, ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಸದಸ್ಯಗಳಾದ ಸುಬ್ಬಣ್ಣ ಆಳ್ವ, ಸುರೇಶ್ ಶೆಟ್ಟಿ, ಪ್ರಶಾಂತ್ ಕೆಪಿ, ಮಾಜೀದ್ ಸಾಹೇಬ್ ರವರ ಉಪಸ್ಥಿತಿಯಲ್ಲಿ ನೀಡಲಾಯಿತು

SHARE
Loading spinner

Leave a Reply

Your email address will not be published. Required fields are marked *

error: Content is protected !!