ಕಾಸರಗೋಡು: ನವರಾತ್ರಿ ಉತ್ಸವದ ನವಮಿಯಂದು ಕೊರಕೋಡು ಟೈಗರ್ಸ್ ನೇತೃತ್ವದಲ್ಲಿ 22ನೇ ವರ್ಷದ ಹುಲಿವೇಷ ಕುಣಿತದ ಊದು ಪೂಜಾ ಕಾರ್ಯಕ್ರಮ ಕಾಸರಗೋಡಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಧಾರ್ಮಿಕ ನೇತಾರ ಶ್ರೀ ರವೀಶ ತಂತ್ರಿ ಕುಂಟಾರು ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ವಿಶ್ವನಾಥ ಮಣಿಯಾಣಿ ಕೊರಕೋಡು, ರಾಜೇಶ್ ಪ್ರಭು ಬಟ್ಟಂಪಾರೆ, ರಾಜೇಶ್ ನುಳ್ಳಿಪ್ಪಾಡಿ, ಮುರಳಿ ಮಾಸ್ಟರ್, ಹರೀಶ್ ಹಾಗೂ ನಗರಸಭಾ ಸದಸ್ಯ ಮಧುಕರ ಉಪಸ್ಥಿತರಿದ್ದರು.

ಗೋಕುಲ್ ಝೂಮ್ ಮತ್ತು ಪ್ರವೀಣ್ ಕೊರಕೋಡು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

