ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ವತಿಯಿಂದ ಕನ್ನಡ ಸಂಸ್ಕೃತಿ ಶಿಬಿರ.

ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ವತಿಯಿಂದ ಕನ್ನಡ ಸಂಸ್ಕೃತಿ ಶಿಬಿರ.

ಎಡನೀರು : ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ಕಾಸರಗೋಡು ಇದರ ನೇತೃತ್ವದಲ್ಲಿ 13 ನೇ ವರ್ಷದ ಐದು ದಿನಗಳ ಉಚಿತ ಕನ್ನಡ ಸಂಸ್ಕೃತಿ ಶಿಬಿರವು ಶ್ರೀ ಈಶ್ವರಾನಂದ ಭಾರತಿ ಸ್ವಾಮೀಜಿ ಹೈಯರಿ ಸೆಕೆಂಡರಿ ಶಾಲೆ ಎಡನೀರು ಕಾಸರಗೋಡಿನಲ್ಲಿ ಇತ್ತೀಚೆಗೆ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ನೆರವೇರಿಸಿದರು.ಮುಖ್ಯ ಅತಿಥಿಯಾಗಿ ಬಿ. ಎ.ಆರ್. ಎಚ್. ಬೋವಿಕ್ಕಾನ ಶಾಲೆಯ ಮ್ಯಾನೇಜರ್ ಗಂಗಾಧರ ನಾಯರ್ ಪಾಡಿಯವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಐದು ದಿನಗಳ ತನಕ ಜರಗಿದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಲಾಗಿ ನಿರ್ಮಲ್ ಕುಮಾರ್ ಮುಳ್ಳೇರಿಯ,ವಿನೋದ್ ಚೇವಾರು ,ಕಿಶೋರ್ ಪೆರ್ಲ, ತೇಜಸ್,ಅರವಿಂದಾಕ್ಷ ಮಾಣಿಲ,ಅಶೋಕ್ ಕೊಡ್ಲಮೊಗರು ,ಕೃತಿ,ವೈಷ್ಣವಿ ರವರು ಭಾಗವಹಿಸಿ ವ್ಯಕ್ತಿತ್ವ ವಿಕಸನ, ವಿಜ್ಞಾನ ವಿನೋದ,ವೆಜಿಟೇಬಲ್ ಕಾರ್ವಿಂಗ್,ಗಾನ ಸುಧಾ ದೇಶ ಭಕ್ತಿ ಗೀತೆ ಹಾಗೂ ಭಾವ ಗೀತಾ ಲಹರಿ,ಥಿಯೇಟರ್ ಗೇಮ್,ಮೋಜಿನ ಗಣಿತ,ರಂಗ ಗೀತೆ ಮೊದಲಾದ ವಿಷಯಗಳ ಕುರಿತು ತರಗತಿ ನಡೆಸಿಕೊಟ್ಟರು.ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಮುಂದಾಳು ಶ್ರೀಮತಿ ಪ್ರಭಾ ಕಲ್ಲೂರಾಯರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಡನೀರು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿಣಿ ಶ್ರೀಮತಿ ಸರಸ್ವತಿ ಎಡನೀರು,ಚೆಂಗಳ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಶಾಂತಾ ಕುಮಾರಿ ಟೀಚರ್,ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಇದರ ಕೋಶಾಧಿಕಾರಿ ರಾಘವೇಂದ್ರ ಭಟ್ ಉಡುಪುಮೂಲೆ ,ಅಶೋಕ್ ಕೊಡ್ಲಮೊಗರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು.

ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ಕಾಸರಗೋಡು ಇದರ ಅಧ್ಯಕ್ಷರಾದ ಶ್ರೀಮತಿ ಅನುಪಮ ಉಡುಪುಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹನಾ ,ಮಯೂರಿ ಮತ್ತು ಮನವಿ ಸಹಕಾರ ನೀಡಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!