ಉಪ್ಪಳ–ಬೇಕೂರು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ವಾಕಿಂಗ್ ಟುಗೆದರ್ ಫೌಂಡೇಶನ್, ಕಾಸರಗೋಡು ಆಸ್ಟರ್ ಮಿಮ್ಸ್ ಜೊತೆಗೂಡಿ ಕ್ಯಾನ್ಸರ್ ಸ್ಕ್ರೀನಿಂಗ್ ಟೆಸ್ಟ್ ಶಿಬಿರವನ್ನು ಆಯೋಜಿಸುತ್ತಿದೆ. ಉದ್ಯೋಗ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಫೌಂಡೇಶನ್ ವಿಶೇಷ ಗಮನ ನೀಡುತ್ತಿದೆ. ಕಳೆದ ಎರಡು ವರ್ಷಗಳಿಂದ ಮಂಜೇಶ್ವರ ಪ್ರದೇಶದ ವಿವಿಧ ಸಮಸ್ಯೆಗಳ ಕುರಿತು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ .

ಇತರ ಸ್ವಯಂಸೇವಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳೊಂದಿಗೆ ಸಹಕಾರ ಮಾಡಿಕೊಂಡು ಇನ್ನೂ ಹಲವು ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯೂ ಇದೆ. ಫೆಬ್ರವರಿ 10ರಂದು ಮಂಗಳವಾರ ಬೇಕೂರು ಸುಭಾಷ್ ನಗರದಲ್ಲಿರುವ ಸೀ ಪ್ಯಾಲೇಸ್ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ.
ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಚಿಕಿತ್ಸೆ ನೀಡಲು ಸಾಧ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುವುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ವಾಕಿಂಗ್ ಟುಗೆದರ್ ಫೌಂಡೇಶನ್‌ನ ಅಧ್ಯಕ್ಷ ಅಬೂಬಕ್ಕರ್ ರಾಯಲ್ ಹಾಗೂ ಕಾರ್ಯದರ್ಶಿ ಅಸೀಂ ಮಣಿಮುಂಡ ಅವರು ರಾಯಲ್ ಎಸ್ಟೇಟ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.



