ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಸಂಸ್ಥಾಪಕ ಅಧ್ಯಕ್ಷ ಶಿವರಾಮ ಕಾಸರಗೋಡು ಪುನರಾಯ್ಕೆಗೊಂಡಿದ್ದಾರೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) , ಕನ್ನಡ ಗ್ರಾಮ, ಕಾಸರಗೋಡು ಇದರ 36 ನೇ ಸಾಲಿನ ವಾರ್ಷಿಕ ಮಹಾಸಭೆಯು ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ಅಕ್ಟೋಬರ್ 25 ರಂದು ನಡೆಯಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. 2025 – 26 ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು ಮಂಡಿಸಿ ಅನುಮೋದನೆ ಪಡೆದರು. 2026 -27 ನೇ ಸಾಲಿನ ಯೋಜನೆಗೆ ರೂಪಾಯಿ 25 ಲಕ್ಷ ಮೊತ್ತವನ್ನು ಮುಂಗಡವಾಗಿ ಕಾಯ್ದಿರಿಸಲಾಯಿತು.

ಕಾಸರಗೋಡು ಗೋ- ಕುಟೀರವನ್ನು 2026 ನವಂಬರ್ 28 ರಂದು ಉದ್ಘಾಟಿಸಲು ನಿರ್ಧರಿಸಲಾಯಿತು. ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ – 2026 ಮತ್ತು ಕೇರಳ – ಕರ್ನಾಟಕ ಉತ್ಸವ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವವನ್ನು 2026 ನವಂಬರ್ 28 ಮತ್ತು 29ರಂದು ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಕೇರಳ ರಾಜ್ಯ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಹಯೋಗ ನೀಡುವುದು .
ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಇದರ ಕೇರಳ ರಾಜ್ಯ ತೃತೀಯ ದಾಸ ಸಾಹಿತ್ಯ ಸಮ್ಮೇಳನ ಮತ್ತು ಕೇರಳ ರಾಜ್ಯ ಭಜನಾ ಸಂಘಟನೆಗಳ ಸಮಾವೇಶಕ್ಕೆ ಸಹಯೋಗ ನೀಡುವುದು

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಕಾಸರಗೋಡು ಜಿಲ್ಲಾ 8 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಹಯೋಗ ನೀಡುವುದು.
ಕಾಸರಗೋಡು ಜಿಲ್ಲಾ ( ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘದ 42 ನೇ ಸಂಸ್ಥಾಪನಾ ವರ್ಷಾಚರಣೆ ಕಾರ್ಯಕ್ರಮಕ್ಕೆ ಸಹಯೋಗ ನೀಡುವುದು .
ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ,ಕರ್ನಾಟಕ ಸರಕಾರದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳ ಜಂಟಿ ಸಹಯೋಗದಲ್ಲಿ ಐದು ದಿನಗಳ ಕಾಲ ಕಾಸರಗೋಡು ಕನ್ನಡ ಗ್ರಾಮದಲ್ಲಿ ಅಂತರ ರಾಜ್ಯ ಮಟ್ಟದ ಬಹುಭಾಷಾ ಸಾಹಿತ್ಯೋತ್ಸವ, ಯಕ್ಷಗಾನೋತ್ಸವ, ನಾಟಕೋತ್ಸವ, ಸಂಗೀತೋತ್ಸವ, ನೃತ್ಯೋತ್ಸವಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 2026- 27 ನೇ ಸಾಲಿನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಶಿವರಾಮ ಕಾಸರಗೋಡು ,ಅಧ್ಯಕ್ಷರು ರಾಧಾಕೃಷ್ಣ ಕೆ ಉಳಿಯತ್ತಡ್ಕ, ಉಪಾಧ್ಯಕ್ಷರು, ಕೆ. ಜಗದೀಶ್ ಕೂಡ್ಲು, ಪ್ರಧಾನ ಕಾರ್ಯದರ್ಶಿ, ಕಾವ್ಯ ಕುಶಲ, ಜೊತೆ ಕಾರ್ಯದರ್ಶಿ, ರಾಧಾ ಕೆ., ಕಾಸರಗೋಡು ಕೋಶಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎಲ್.ಭಾರದ್ವಾಜ್ ಬೇಕಲ್, ಕೆ. ಗುರುಪ್ರಸಾದ ಕೋಟೆಕಣಿ, ಕುಶಲಕುಮಾರ್ .ಕೆ, ಶ್ರೀಕಾಂತ್ ಕಾಸರಗೋಡು, ಕಿಶೋರ್ ಕುಮಾರ್. ಕೆ, ದಿವಾಕರ ಪಿ .ಅಶೋಕನಗರ, ಬಿ. ಸತೀಶ ಕೂಡ್ಲು, ಎನ್. ಯೋಗೀಶ್ ಕೋಟೆಕಣಿ, ಶ್ರೀಕೃಷ್ಣ ಮಾಯ್ಲೆಂಗಿ,ಕೆ ನಿರಂಜನ ಕಾಸರಗೋಡು ಮುಂತಾದವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಶ್ರೀಮತಿ ಶಾರದ ಬಿ. ಕೌನ್ಸಿಲರ್ ಕಾಸರಗೋಡು ನಗರಸಭೆ, ಜಯಾನಂದ ಕುಮಾರ್ ಕಾಸರಗೋಡು, ಕೆ ಎನ್ ವೆಂಕಟ್ರಮಣ ಹೊಳ್ಳ ಕಾಸರಗೋಡು, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಮಾಜಿ ಕೌನ್ಸಿಲರ್ ಶಂಕರ್ ಕೆ . ಕೆ.ವರಪ್ರಸಾದ್ ಕೋಟೆಕಣಿ, ಕೆ .ವಿ ರಮೇಶ್ ಕಾಸರಗೋಡು, ಲವ ಕೆ. ಮೀಪುಗುರಿ, ಗಣೇಶ್ ನಾಯ್ಕ್. ಕೆ, ಪುರುಷೋತ್ತಮ ಎಂ. ನಾಯ್ಕ್, ಅಶ್ವಿನಿ ಗುರುಪ್ರಸಾದ್, ಶ್ವೇತಾ ಯೋಗೀಶ್, ಜಯಶ್ರೀ ದಿವಾಕರ, ಶಿಲ್ಪಾ ವರಪ್ರಸಾದ್,ಪ್ರದೀಪ್ ಬೇಕಲ್ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಎನ್ . ಸಂದೇಶ್ ಕೋಟೆಕಣಿ ಅವರನ್ನು ಆಯ್ಕೆ ಮಾಡಲಾಯಿತು.

