ಕುಂಬಳೆಯಲ್ಲಿ ಆನ್‌ಲೈನ್ ವಂಚನೆ! ಯುವತಿಯ ಖಾತೆಯಿಂದ ಸಾವಿರಾರು ರೂಪಾಯಿ ಲೂಟಿ!

​

ಕುಂಬಳೆ: ವಾಹನ ದಂಡದ ಹೆಸರಿನಲ್ಲಿ ಕುಂಬಳೆಯಲ್ಲಿ ಸೈಬರ್ ವಂಚನೆ ನಡೆದಿದ್ದು, ಯುವತಿಯೊಬ್ಬರ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ವಂಚಕರು ಒಟ್ಟು 41,329 ರೂ. ಎಗರಿಸಿದ್ದಾರೆ.

ಕುಂಬಳೆ ನಾಯ್ಕಾಪು ನಾರಾಯಣಮಂಗಲ ಹೌಸ್‌ನ ಅಕ್ಷತಾ ಕೆ. ಎಂಬವರ ಬ್ಯಾಂಕ್ ಖಾತೆಯಿಂದ ಈ ಹಣ ಕಡಿತಗೊಂಡಿದೆ. ಅವರ ಮೊಬೈಲ್ ಫೋನ್‌ಗೆ ವಾಹನ ದಂಡ ಪಾವತಿಸಬೇಕೆಂದು ಬಂದಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಸೈಬರ್ ವಂಚಕರು ಹತ್ತು ಹಲವು ಕಂತುಗಳಲ್ಲಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.

ಈ ಸಂಬಂಧ ಅಕ್ಷತಾ ಅವರು ನೀಡಿದ ದೂರಿನ ಮೇರೆಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಇಂತಹ ಅಪರಿಚಿತ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!