ಬಂದ್ಯೋಡ್ : ಆಟೋ ಚಾಲಕ ನೇಣಿಗೆ ಶರಣು

​ ಕುಂಬಳೆ : ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂದ್ಯೋಡ್ ಅಡ್ಕದಲ್ಲಿ ಆಟೋ ಚಾಲಕನೊಬ್ಬ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂದ್ಯೋಡ್ ಆಟೋ ನಿಲ್ದಾಣದ ಚಾಲಕ ಎ. ನಾಗೇಶ್ ಪೂಜಾರಿ (37) ಸಾವನ್ನಪ್ಪಿದ ದುರ್ದೈವಿ.
ಬುಧವಾರ ಹಗಲಿನಲ್ಲಿ ಮನೆಯ ಹಾಲ್‌ನ ಫ್ಯಾನ್ ಹುಕ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಆರ್ಥಿಕ ಸಮಸ್ಯೆಯಿಂದ ನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ಶಿವಪ್ಪ ಪೂಜಾರಿ ಮತ್ತು ಗಿರಿಜಾ ದಂಪತಿಯ ಪುತ್ರರಾಗಿದ್ದಾರೆ. ಇವರಿಗೆ ಪತ್ನಿ ಸಂಧ್ಯಾ, ಏಕೈಕ ಪುತ್ರಿ ಅನ್ವಿತಾ ಹಾಗೂ ಸಹೋದರ-ಸಹೋದರಿಯರಾದ ದಿನೇಶ್ ಪೂಜಾರಿ, ಜಗದೀಶ್ ಪೂಜಾರಿ, ಆಶಾಲತಾ, ಹೇಮಲತಾ, ಮಮತಾ, ಧನಲಕ್ಷ್ಮಿ ಮತ್ತು ದೀಪಿಕಾ ಇದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!