ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ಭಾರತ್ ಭವನ್, ತಿರುವನಂತಪುರ (ಕೇರಳ ಸರಕಾರ) ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ – 2026’ ಹಾಗೂ ‘ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ’ ಸಮಾರಂಭ ಡಿ.3ರಂದು ಮಧ್ಯಾಹ್ನ 2ರಿಂದ ತಿರುವನಂತಪುರದ ತೈಕಾಡ್ ಪೌಂಡ್ ಕಾಲನಿಯ ಸಿ.ವಿ.ರಾಮನ್ ಪಿಳ್ಳೆ ರಸ್ತೆಯಲ್ಲಿರುವ ಭಾರತ್ ಭವನದಲ್ಲಿ ನಡೆಯಲಿದೆ.
ಮಧ್ಯಾಹ್ನ 2ರಿಂದ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.


ಉದ್ಘಾಟನೆ ಮತ್ತು ಗಣ್ಯರ ಉಪಸ್ಥಿತಿ
ಕೇರಳ ಸರಕಾರದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ದೇವಸ್ವಂ ಸಚಿವ ಕೆ.ಮುರಳೀಧರನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಕೇರಳ ಸರಕಾರದ ನಾಗರಿಕ ಸರಬರಾಜು ಇಲಾಖೆ ಸಚಿವ ಅನೂಪ್ ಜೇಕಬ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಾರಿಗೆ ಸಚಿವ ಸಿ.ಪಿ.ಜೋನ್ ಪೌರ ಸನ್ಮಾನ ನೆರವೇರಿಸಲಿದ್ದಾರೆ.
ಕೇರಳ ಸರಕಾರದ ಮುಖ್ಯ ಸಚೇತಕ ಅಪು ಜೋನ್ ಜೋಸೆಫ್ ಅವರು ‘ಮನದ ಮಾತು (2ನೇ ಆವೃತ್ತಿ)’ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಹಾಗೂ ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪೌರ ಸನ್ಮಾನ
ಇದೇ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್. ನಾಸಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಅವರಿಗೆ ವಿಶೇಷ ಪೌರ ಸನ್ಮಾನ ನೆರವೇರಲಿದೆ.
ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಈ ಬಾರಿಯ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಕಾಸರಗೋಡು (ಕೃಷಿ), ಡಾ. ಮೂಡಂಬೈಲು ರವಿ ಶೆಟ್ಟಿ ದೋಜಿಂಜಗುತ್ತು, ಕತಾರ್ (ಹೊರನಾಡ ಕನ್ನಡಿಗ), ಅರುಣ್ ಕುಮಾರ್ ಎಂ.ಕೆ., ದುಬೈ (ಕನ್ನಡ ಸಂಘಟನೆ), ಡಾ.ವಿ.ಬಾಲಕೃಷ್ಣನ್ ಅರಾವತ್ ಕಾಸರಗೋಡು (ಪರಿಸರ ಸಂರಕ್ಷಣೆ), ಯು.ಕೆ. ಸೈಫುಲ್ಲ ತಂಙಳ್, ಮಂಜೇಶ್ವರ (ಸಮಾಜ ಸೇವೆ), ಅಶೋಕ ಯಂಕಪ್ಪ ಚಂದರಗಿ, ಬೆಳಗಾವಿ (ಕನ್ನಡ ಸಂಘಟನೆ), ಮೊಹಮ್ಮದ್ ಬಡ್ಡೂರು, ಮಂಗಳೂರು (ಸಾಹಿತ್ಯ), ಮಧುಸೂಧನ್ ಟಿ.ಆರ್., ಮುಂಬೈ (ಕಲಾ ಸಂಘಟನೆ), ಹೆಚ್.ಜಿ. ಮದನ ಗೌಡ, ಹಾಸನ (ಪತ್ರಿಕೋದ್ಯಮ), ಅನಿತಾ ಡಿಸೋಜಾ ಬೇಳ (ಸಂಗೀತ), ಶಿವಾನಂದ ಕೋಟ್ಯಾನ್, ಕಟಪಾಡಿ, ಮಸ್ಕತ್ (ಕನ್ನಡ ಸೇವೆ), ಶಾಫಿ ಬಂದಸಾಲೆ (ಉದಯೋನ್ಮುಖ ಕವಿ), ಚಿರಂಜೀವಿ ಕುಂಬಳೆ (ಸಂಘ ಸಂಸ್ಥೆ)
ಅತಿಥಿಗಳು ಮತ್ತು ಆಯೋಜಕರು
ಕೇರಳ ರಾಜ್ಯ ಯೋಜನಾ ಆಯೋಗದ ಸದಸ್ಯ ಸಿ.ಹೆಚ್. ಅಬ್ದುಲ್ ರಹೀಂ, ಕ.ಸಾ.ಪ. ಕೇರಳ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ಆಳ್ವ ಮಡ್ವ, ಶರಿನ್ ಮುಹಮ್ಮದ್, ದ.ಕ.ಜಿಲ್ಲಾ ಕ.ಜಾ.ಪ. ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಚೇರಾಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಘವ ಚೇರಾಲ್, ತಿರುವನಂತಪುರ ಕರ್ನಾಟಕ ಸಂಘದ ಕಾರ್ಯದರ್ಶಿ ಡಾ.ಅನಿತ ಕುಮಾರಿ ಹೆಗಡೆ, ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ್ ಪ್ರಸಾದ್ ಪಾಣೂರು, ಮಾಧ್ವ ತುಳು ಬ್ರಾಹ್ಮಣ ಸಮಾಜಂ ಜೊತೆ ಕಾರ್ಯದರ್ಶಿ ಸೂರ್ಯನಾರಾಯಣ ಕುಂಜುರಾಯರ್ ಹಾಗೂ ಕವಿ-ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕವಿ ಗಿರೀಶ್ ಪುಲಿಯೂರು ಕಾವ್ಯ ಶುಭಾಶಂಸನೆ ಮಾಡಲಿದ್ದಾರೆ.ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಎನ್. ಚನಿಯಪ್ಪ ನಾಯ್ಕ, ಸಂಚಾಲಕ ರವಿ ನಾಯ್ಕಾಪು, ಝಡ್.ಎ. ಕಯ್ಯಾರು ಉಪಸ್ಥಿತರಿರುವರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಸಂಘ ತಿರುವನಂತಪುರ ಹಾಗೂ ಮಾಧ್ವ ತುಳು ಬ್ರಾಹ್ಮಣ ಸಮಾಜ ತಿರುವನಂತಪುರ ಈ ಉತ್ಸವಕ್ಕೆ ಸಹಯೋಗ ನೀಡಿವೆ ಎಂದು ಸಂಯೋಜಕ ಎ.ಆರ್. ಸುಬ್ಬಯ್ಯಕಟ್ಟೆ ಹಾಗೂ ಸಂಚಾಲಕ ಅಖಿಲೇಶ್ ನಗುಮುಗಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
