ಸಮಗ್ರ ಚಾಂಪಿಯನ್ ಪ್ರಶಸ್ತಿ ಸಂಭ್ರಮ: ತಲೇಕಳ ಶಾಲೆಯಲ್ಲಿ ವಿಜಯೋತ್ಸವ ಮೆರವಣಿಗೆ

ಮಂಜೇಶ್ವರ : ಮಂಜೇಶ್ವರ ಉಪಜಿಲ್ಲಾಮಟ್ಟದ ಶಾಲಾ ಕಲೋತ್ಸವದ LP ಜನರಲ್ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಲೇಕಳದ ವತಿಯಿಂದ ನವೆಂಬರ್ 26, 2026ರ ಗುರುವಾರ ಸಂಭ್ರಮದ ವಿಜಯೋತ್ಸವ ಮೆರವಣಿಗೆ ನಡೆಯಿತು.

ಮಧ್ಯಾಹ್ನ 2.45ಕ್ಕೆ ಸರಿಯಾಗಿ ಆರಂಭಗೊಂಡ ವಿಜಯೋತ್ಸವ ಮೆರವಣಿಗೆಯು ಬಟ್ಟಿಪದವು, ಮೊರತ್ತಣೆ ಹಾಗೂ ಕಡಂಬಾರು ಪೇಟೆಗಳ ಮೂಲಕ ಸಾಗಿತು.ಶಾಲೆಯ ಮುಖ್ಯ ಶಿಕ್ಷಕರಾದ ಅಬ್ದುಲ್ ಮಜೀದ್ ಅವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.PTA ಅಧ್ಯಕ್ಷರಾದ ಹರೀಶ್ ರವರು ಜೊತೆಗಿದ್ದರು. PTA ಉಪಾಧ್ಯಕ್ಷರಾದ ಮಮ್ಮುನ್ನಿ ಬಟ್ಟಿ ಪದವು, MPTA ಅಧ್ಯಕ್ಷೆಯಾದ ಪವಿತ್ರ ಮೊರತ್ತಣೆ ಮೊದಲಾದವರು ಸಹಕರಿಸಿದರು.

ನಿವೃತ್ತ ಮುಖ್ಯ ಶಿಕ್ಷಕರಾದ ರವೀಂದ್ರ ಯಂ,ಹಳೆ ವಿದ್ಯಾರ್ಥಿಗಳಾದ ಪ್ರಭಾವತಿ ತಲೇಕಳ, ರಮಣಿ ಚೌಟ ತಲೇಕಳ, ಮೊಹಮ್ಮದ್ ಶಾಫಿ ತಲೇಕಳ,ಮೋಹನ್ ದಾಸ್ ತಲೇಕಳ, ಶಾಲೆಯ ಅಧ್ಯಾಪ ಕರು, ರಕ್ಷಕರು ಸಹಕಾರ ನೀಡಿದರು. ಮಕ್ಕಳು ಘೋಷಣಾ ವಾಕ್ಯಗಳನ್ನು ಹೇಳುತ್ತಾ ಬ್ಯಾಂಡ್ ವಾದ್ಯಗಳ ಮೂಲಕ ಸಾಗಿದ ಮೆರವಣಿಗೆ ಆಕರ್ಷಣೀಯವಾಗಿತ್ತು. ಹಳೆ ವಿದ್ಯಾರ್ಥಿಗಳು, ಊರ ರಿಕ್ಷಾ ಚಾಲಕರು, ಅಂಗಡಿಯ ಮಾಲೀಕರು ಮಕ್ಕಳಿಗೆ ಮಾಲ್ಟ್ ಕ್ಷೀರ, ಪಾನೀಯ, ಮಿಠಾಯಿ ವಿತರಿಸಿದರು.ಎಲ್ಲರ ಸಹಕಾರದೊಂದಿಗೆ ಮೆರವಣಿಗೆಯು ಯಶಸ್ವಿಯಾಗಿ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!