ಉಪ್ಪಳ ಮುಟ್ಟಂ ಶಿರಿಯ ಪ್ರಗತಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ಬಿನ ವತಿಯಿಂದ 28 ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು.
ವಿವಿಧ ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ ಹಾಗೂ ಮಕ್ಕಳಿಗೆ ವಿವಿಧ ಅತೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮದ್ಯಾನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಯು.ಎಮ್ ಮೂಲ್ಯ ಧಾರ್ಮಿಕ ಭಾಷಣ ಮಾಡಿದರು. ಶಶಿ ಆರ್.ಕೆ ಅಧ್ಯಕ್ಷತೆ ವಹಿಸಿದ ಸಭೆ ಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರಾಷ್ಟ್ರಿಯ ಪ್ರಶಸ್ತಿ ಪಡೆದ ಡಾ. ವಿಜಯ್ ಪಂಡಿತ್ ಮಂಗಲ್ಪಾಡಿ, ಶ್ರೀಮತಿ ಶಿಜಿ ವಿ ವಿ ಮೊದಲದವರು ಭಾಗವಹಿಸಿದರು.
ವಿವಿಧ ಆಟೋಟ ಸ್ಪರ್ಧೆ ಹಾಗೂ ಹಗ್ಗಜಗ್ಗಾಟ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಟೀಮ್ ಪ್ರಗತಿ ಮುಟ್ಟಂ ಇವರಿಂದ ಕೈ ಕೊಟ್ಟು ಕಳಿ ಮತ್ತು ಪುಟಾಣಿ ಮಕ್ಕಳಿಂದ ನೃತ್ಯ ನಡೆಯಿತು.
ಈ ಸಂದರ್ಭದಲ್ಲಿ ಎಸ್.ಎ ಒರ್ಕೆಸ್ಟ್ರಾ ಬಂದಿಯೋಡ್ ಇವರಿಂದ ಮ್ಯೂಸಿಕಲ್ ನೈಟ್ ವಿಶೇಷ ಕಾರ್ಯಕ್ರಮ ನಡೆಯಿತು.