ಉಪ್ಪಳ : ಪಚ್ಲಂಪಾರೆಯಲ್ಲಿ ಮೊಸರುಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ 40 ನೇ ವರ್ಷದ ಮೊಸರುಕುಡಿಕೆ ಉತ್ಸವವು ಶ್ರೀ ಉಮಾ ಭಗವತಿ ಭಜನಾ ಮಂದಿರ ವಠಾರದಲ್ಲಿ ನಡೆಯಿತು.
ದೀಪ ಪ್ರಜ್ವಲನೆಯ ನಂತರ ಶ್ರೀ ಉಮಾ ಭಗವತಿ ಕುಣಿತ ಭಜನೆ ,ಭಕ್ತಿ ಗೀತೆ ಸ್ಪರ್ಧೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ನಂದರಾಜ ಭಂಡಾರಿ ಮುಳಿಂಜ ಗುತ್ತು ,ದಿನೇಶ್ ಮುಳಿಂಜ ,ಶ್ರೀ ವಿಜಯ ಪಂಡಿತ್ ಮಂಗಲ್ಪಾಡಿ ,ಬಾಬು ಪಚ್ಲಂಪಾರೆ ,ಭಾಸ್ಕರನ್ ಮುಂತಾದವರು ಉಪಸ್ಥಿತರಿದ್ದರು.ನಂತರ ಸ್ಥಳೀಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು .