ಅತೀ ಪುರಾತನ ಹಾಗೂ ಇತಿಹಾಸ ಪ್ರಸಿದ್ಧವಾದ ಪುತ್ತಿಗೆ ಶ್ರೀ ಧೂಮಾವತಿ ಕೋಮಾರಾಯ ದೈವಸ್ಥಾನವು ಅತೀ ಪುರಾತನವಾದದ್ದು ಅಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನವನ್ನು ಜೀರ್ಣೋದ್ದಾರ ಮಾಡುವ ಉದ್ದೇಶದಿಂದ ಕ್ಷೇತ್ರದಲ್ಲಿ ನಿಧಿ ಕುಂಭ ವಿಜ್ಞಾಪನಾ ಪತ್ರ ಬಿಡುಗಡೆಯು ಆಗಸ್ಟ್ 24 ಭಾನುವಾರದಂದು ನಡೆಯಲಿದೆ.
ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಬಾಕುಡ ಸಮುದಾಯದ 18 ದೈವಸ್ಥಾನಗಳ ದೈವಗಳ ಪಾತ್ರಿಗಳ ಒಕ್ಕೂಟದ ಅಧ್ಯಕ್ಷರಾದ ಶಂಕರ್ ಅಡ್ಕ ದೀಪ ಪ್ರಜ್ವಲನೆ ಮಾಡಲಿದ್ದಾರೆ .ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಬ್ಬಣ್ಣ ಆಳ್ವ ಸಮಾರಂಭವನ್ನು ಉಧ್ಘಾಟಿಸಲಿದ್ದಾರೆ.
ಪುತ್ತಿಗೆ ಶ್ರೀ ಸುಬ್ರಾಯ ಕ್ಷೇತ್ರದ ಗುರಿಕಾರರಾದ ಸುಬ್ರಮಣ್ಯ ಭಟ್ ಚಕ್ಕಣಿಕೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಡೆಪ್ಯೋಟಿ ತಹಶೀಲ್ದಾರ್ ಶಿವಾನಂದ ಮಂಗಲ್ಪಾಡಿ ವಿಜ್ಞಾಪನಾ ಪತ್ರ ಬಿಡುಗಡೆ ಗೊಳಿಸಲಿದ್ದಾರೆ.ಕೃಷ್ಣ ಶಿವಕೃಪಾ ಕುಂಜತ್ತೂರ್ ಧಾರ್ಮಿಕ ಭಾಷಣ ಮಾಡಲಿದ್ದಾರೆ.ಶ್ರೀ ಸತೀಶ್ಚಂದ್ರ ಭಂಡಾರಿ ಕೊಳಾರು , ಮಹಾಲಿಂಗೇಶ್ವರ ಪಿ ಎ,ಹರೀಶ್ ಕೊಟ್ಟಾರಿ ,ತುಳಸೀದಾಸ್ ಮಂಜೇಶ್ವರ ,ವಿಜಯ ಪಂಡಿತ್ ಮಂಗಲ್ಪಾಡಿ ,ಶಿವ ಸುಜಾತ ಮಂಜೇಶ್ವರ ಮೊದಲಾದವರು ಕಾರ್ಯಕ್ರಮಕ್ಕೆ ಶುಭಾಂಶನೇ ಗೆಯ್ಯಲಿದ್ದಾರೆ