ಮಂಜೇಶ್ವರ: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ,:ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಜೇಶ್ವರ : ಅಪ್ರಾಪ್ತೆ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿ ತಲೆಮರೆಸೀಕೊಂಡಿದ್ದಆರೋಪಿ, ಕರ್ನಾಟಕ ಚಿತ್ರದುರ್ಗ ಮೂಲದ ತಿಮ್ಮಯ್ಯ (38)ಎಂಬಾತನನ್ನು ಮಂಜೇಶ್ವರ ಠಾಣಾಧಿಕಾರಿ ಬಂಧಿಸಿದ್ದಾರೆ. ತಲೆಮರೆಸಿಕೊಂಡ ಆರೋಪಿಯನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿಜಯ ಭಾಸ್ಕರ್ ರೆಡ್ಡಿ ನಿರ್ದೇಶನದಂತೆ ಎ ಎಸ್ಪಿ ನಂದಗೋಪನ್ ಅವರ ಮೇಲ್ನೋಟದ ತನಿಖೆಯಲ್ಲಿ ಮಂಜೇಶ್ವರ ಎಸ್‌ ಏಕೆ. ಆರ್. ಉಮೇಶ್ ನೇತೃತ್ವದಲ್ಲಿ ಬಂಧಿಸಲಾಯಿತು.

ಅಪ್ರಾಪ್ತ ಬಾಲಕಿ ಗೆ ದೌರ್ಜನ್ಯ ನೀಡಿದ ಬಳಿಕ ಪೋಕ್ಸೊ ಕೇಸು ಹೊಂದಿದ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು.
ಅನಂತರ ಈತನನ್ನು ಪತ್ತೆ ಹಚ್ಚಿ ಮರು ಬಂಧನಕ್ಕೊಳಪಡಿಸಲಾಗಿರಲಿಲ್ಲ. ಇದೀಗ ಪೋಲೀಸ್ ವರಿಷ್ಠಾಧಿಕಾರಿ ನೀಡಿದ ಸಲಹೆಯಂತೆ ನಡೆದ ತನಿಖೆಯಲ್ಲಿ ಆರೋಪಿಯನ್ನು ಬೆಂಗಳೂರಿನಿಂದ ಪತ್ತೆ ಹಚ್ಚಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!