ಕೊಂಡೆವೂರ್ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಅಖಂಡ ಭಜನೋತ್ಸಹ ,ಸಾಮೂಹಿಕ ವಿಷ್ಣು ಸಹಸ್ರ ನಾಮ ಹವನ ಆಗಸ್ಟ್ 24 ರಂದು.

ಉಪ್ಪಳ : ಕೊಂಡೆವೂರ್ ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ 22 ನೇ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಅಖಂಡ ಭಜನೋತ್ಸಹ ,ಸಾಮೂಹಿಕ ವಿಷ್ಣು ಸಹಸ್ರ ನಾಮ ಹವನ ಆಗಸ್ಟ್ 24 ಭಾನುವಾರದಂದು ಪರಮಪೂಜ್ಯ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ ,ಬೆಳಗ್ಗೆ 8 ಗಂಟೆಗೆ ಶ್ರೀ ವಿಷ್ಣು ಸಹಸ್ರನಾಮ ಹವನ ಆರಂಭ,ಪೂರ್ವಾಹ್ನ 10 ಕ್ಕೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಆರಂಭ,10.45 ಕ್ಕೆ ಪೂರ್ಣಾಹುತಿ ಮಹಾಪೂಜೆ ,ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.

ಆಗಸ್ಟ್ 21 ರ ಸೂರ್ಯಾಸ್ತದಿಂದ ದಿನಾಂಕ 23 ರ ಸೂರ್ಯಾಸ್ತದ ತನಕ 48 ಗಂಟೆಗಳ ಅಖಂಡ ಭಜನೋತ್ಸವ ನಡೆಯಲಿದೆ. 24 ರಂದು ವೇದಮೂರ್ತಿ ಶ್ರೀ ಹರಿನಾರಾಯಣ ಮಯ್ಯ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಸಹಿತ ಶ್ರೀ ವಿಷ್ಣು ಸಹಸ್ರನಾಮ ಹವನ ನಡೆಯಲಿದೆ.ಪೂರ್ವಾಹ್ನ 11 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ರಾಜ್ಯ ಸಭಾ ಸದಸ್ಯ ಶ್ರೀ ಕೆ .ನಾರಾಯಣ ಬೆಂಗಳೂರು ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಸಿ.ಎಂ.ಆ‌ರ್. ವಿಶ್ವವಿದ್ಯಾಲಯ ಹಾಗೂ ಸಿ.ಎಂ.ಆರ್. ಸಮೂಹ ಸಂಸ್ಥೆಯ ಚೆಯರ್‌ಮೆನ್ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಡಾ. ಕೆ. ಸಿ. ರಾಮಮೂರ್ತಿ ,ಬೆಂಗಳೂರು ಆಕ್ಸ್ ಫರ್ಡ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ರಮೇಶ್ ರಾಜು ,ಬ್ರಹ್ಮಶ್ರೀ ಟಿ ಎಸ್ ವಿನೀತ್ ಭಟ್ ,ಕಿಶೋರ್ ಆಳ್ವ,ಶ್ರೀ ಬಿ ಟಿ ರಾಮಚಂದ್ರಪ್ಪ ,ಶ್ರೀ ರಾಜೇಶ್ ಪಡೀಝಟಿಲ್ ,ಗಣೇಶ್ ರೈ ಮುಖ್ಯ ಅಥಿತಿಗಳಾಗಿರುವರು .ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಣ ಬೆಂಗಳೂರು ಅವರನ್ನು ಸನ್ಮಾನಿಸಲಾಗುವುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!